Webdunia - Bharat's app for daily news and videos

Install App

ರಾವಣನ ತಲೆಗೆ ಮೋದಿ ಫೋಟೋ ಅಂಟಿಸಿ ದಹನ (ವಿಡಿಯೋ)

Webdunia
ಗುರುವಾರ, 13 ಅಕ್ಟೋಬರ್ 2016 (10:32 IST)
ಈ ಬಾರಿಯ ದಸರಾದಲ್ಲಿ ದೇಶಾದ್ಯಂತ ಉಗ್ರವಾದವನ್ನು ಖಂಡಿಸಿ ಪಾಕ್ ಪ್ರಧಾನಿ ನವಾಜ್ ಶರೀಫ್ ಮತ್ತು , 26/11 ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಪ್ರತಿಕೃತಿಯನ್ನು ರಾವಣನ ಅವತಾರದಲ್ಲಿ ದಹಿಸಿ ಆಕ್ರೋಶವನ್ನು ಹೊರಹಾಕಲಾಗಿದೆ. ಆದರೆ ಸದಾ ವಾವದಗಳಿಂದಲೇ ಸುದ್ದಿಯಾಗುವ ಜೆಎನ್‌ಯು ಆವರಣದಲ್ಲಿ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು ಮತ್ತು ಬಲಪಂಥೀಯ ಮುಖಂಡರನ್ನು ರಾವಣನಂತೆ ಬಿಂಬಿಸಿ ದಹಿಸಲಾಗಿದೆ. 
ವಿದ್ಯಾರ್ಥಿ ಸಂಘಟನೆ ಎನ್‌ಎಸ್‌ಯುಐ ಸಂಘಟನೆ ಈ ಕೃತ್ಯವನ್ನೆಸಗಿದ್ದು ಈ ವಿಡಿಯೋ ಈಗ ವೈರಲ್ ಆಗಿ ಹರಿದಾಡುತ್ತಿದೆ. 
 
ಆಧುನಿಕ ಮತ್ತು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಅಸತ್ಯದ ವಿರುದ್ಧ ಸತ್ಯದ ವಿಜಯದ ಸಂಕೇತವಾಗಿ ನಾವು ಈ 10 ತಲೆಯ ರಾವಣನನ್ನು ದಹಿಸಿದ್ದೇವೆ. ನಮ್ಮ ಪ್ರಕಾರ ಮೋದಿ ಮತ್ತು ಆರ್‌ಎಸ್ಎಸ್ ಅಸತ್ಯದ ಸಂಕೇತಗಳು ಎಂದು ವಿದ್ಯಾರ್ಥಿ ಸಂಘಟನೆ ಹೇಳಿದೆ. 
 
ರಾವಣನ ಹತ್ತುಮುಖಕ್ಕೆ ಬದಲಾಗಿ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು ಮತ್ತು ಬಲಪಂಥೀಯ ಮುಖಂಡರ ಮುಖವನ್ನು ಜೋಡಿಸಿ ದಹಿಸಲಾಗಿದೆ.
 
ಪ್ರಧಾನಿ ಮೋದಿ ಜತೆಗೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಯೋಗಗುರು ಬಾಬಾ ರಾಮದೇವ್, ಬಿಜೆಪಿ ಸಂಸದರಾದ ಯೋಗಿ ಆದಿತ್ಯ ನಾಥ್, ಸಾಕ್ಷಿ ಮಹಾರಾಜ್, ವಿಶ್ವ ಹಿಂದೂ ಪರಿಷತ್ ಮುಖಂಡೆ ಸಾಧ್ವಿ ಪ್ರಾಚಿ, ಬಿಜೆಪಿ ರಾಜಸ್ಥಾನ ಶಾಸಕ ಜ್ಞಾನದೇವ, ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ, ಅತ್ಯಾಚಾರ ಆರೋಪ ಹೊತ್ತು ಜೈಲು ಸೇರಿರುವ ಸ್ವಯಂ ಘೋಷಿತ ದೇವ ಮಾನವ ಆಸಾರಾಂ ಬಾಪು, ಜೆನ್‌ಯು ಉಪ ಕುಲಪತಿ ಜಗದೀಶ್ ಕುಮಾರ್ ಅವರ ಫೋಟೋಗಳನ್ನು ರಾವಣನ 10 ತಲೆಗೆ ಅಂಟಿಸಿ ಸುಡಲಾಗಿದೆ. 
 
ಬಿಜೆಪಿ ಮುಖಂಡರು ಇದನ್ನು ಬಲವಾಗಿ ಖಂಡಿಸಿದದ್ದು, ಕಾಂಗ್ರೆಸ್ ತನ್ನ ಅಂಗಸಂಸ್ಥೆಯ ಕೃತ್ಯವನ್ನು ಸಮರ್ಥಿಸಿಕೊಂಡಿದೆ. 
 
ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿ ಹಿಂದೂತ್ವವನ್ನು ಹೇರುವ ಪ್ರಯತ್ನವನ್ನು ಮಾಡುತ್ತಿದೆ. ವಿಶ್ವವಿದ್ಯಾನಿಲಯಗಳಲ್ಲಿ ಕೇಂದ್ರದ ಹಸ್ತಕ್ಷೇಪ ಮತ್ತು ದಲಿತರ ಮೇಲಿನ ದೌರ್ಜನ್ಯವನ್ನು ನಾವು ಖಂಡಿಸುತ್ತೇವೆ. ಜತೆಗೆ ಪಾಕ್ ವಶದಲ್ಲಿರುವ ಯೋಧನನ್ನು ಹಿಂತಿರುಗಿ ಕರೆ ತರುವಲ್ಲಿ ಮೋದಿ ಯಾವ ಪ್ರಯತ್ನವನ್ನೂ ಮಾಡಿಲ್ಲ. ಇವನ್ನೆಲ್ಲ ಖಂಡಿಸಿ ನಾವು ಈ ಕೃತ್ಯವನ್ನೆಸಗಿದ್ದೇವೆ ಎಂದು ಎನ್‌ಎಸ್‌ಯುಐ ಸಂಘಟನೆ ಹೇಳಿದೆ. 

ರಾವಣನ ತಲೆಗೆ ಮೋದಿ ಫೋಟೋ ಅಂಟಿಸಿ ದಹನ (ವಿಡಿಯೋ)

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments