Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹೆಣ್ಣು ಮಕ್ಕಳ ಮೇಲೆ ಕಿರುಕುಳ ನಿಲ್ಲಿಸಿ : ಪ್ರಿಯಾಂಕಾ

ಹೆಣ್ಣು ಮಕ್ಕಳ ಮೇಲೆ ಕಿರುಕುಳ ನಿಲ್ಲಿಸಿ : ಪ್ರಿಯಾಂಕಾ
ದೆಹಲಿ , ಬುಧವಾರ, 9 ಫೆಬ್ರವರಿ 2022 (11:14 IST)
ದೆಹಲಿ : ಹಿಜಾಬ್ಗಾಗಿ ಮುಸ್ಲಿಂ ವಿದ್ಯಾರ್ಥಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಇತ್ತ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜುಗಳಿಗೆ ಬರುತ್ತಿದ್ದಾರೆ.

ಈ ಹಿಜಾಬ್ ಧರಿಸಲು ಅವಕಾಶ ಬೇಕು ಎಂದು ಒಂದು ಕಡೆ ವಿದ್ಯಾರ್ಥಿಗಳು ಬೇಡಿಕೆ ಇಟ್ಟರೆ ಮತ್ತೊಂದು ಕಡೆ ಇದನ್ನು ವಿರೋಧಿಸುತ್ತಿರುವ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜುಗಳಿಗೆ ಆಗಮಿಸುತ್ತಿದ್ದಾರೆ.

ಇದರಿಂದಾಗಿ ಉಡುಪಿ, ಕುಂದಾಪುರ, ಭದ್ರಾವತಿ, ಬೆಳಗಾವಿ, ವಿಜಯಪುರ, ಚಿಕ್ಕಮಗಳೂರಿನ ಕೊಪ್ಪ ಕಾಲೇಜಿನಲ್ಲಿ ವಸ್ತ್ರಸಂಹಿತೆ ವಿವಾದದ ಚರ್ಚೆ ಮತ್ತೆ ಆರಂಭವಾಗಿದೆ.

ಹೀಗಿರುವಾಗಲೇ ಹಿಜಾಬ್ ವಿವಾದ ಹೈಕೋರ್ಟ್ ಮೆಟ್ಟಿಲೇರಿದೆ. ಹಿಜಾಬ್ ಧರಿಸಲು ಅನುಮತಿ‌ಗೆ ಕೋರಿ ಮುಸ್ಲಿಂ ಯುವತಿಯರು ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಹಿಜಾಬ್- ಕೇಸರಿ ವಿವಾದ ರಾಜಕೀಯದಲ್ಲೂ ಸಂಚಲನ ಮೂಡಿಸಿದ್ದು, ಟ್ವೀಟ್ ಮೂಲಕ ಅನೇಕರು ಪರ ವಿರೋಧ ವ್ಯಕ್ತಪಡಿಸಿದ್ದಾರೆ.

ಸದ್ಯ ಹಿಜಾಬ್ ವಿವಾದಕ್ಕೆ ಸಂಬಂಧಪಟ್ಟಂತೆ ರಾಹುಲ್ ಗಾಂಧಿ ಟ್ವೀಟ್ ಬಳಿಕ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ. ಯಾವ ಬಟ್ಟೆ ಧರಿಸಬೇಕೆಂಬುದು ಹೆಣ್ಣು ಮಕ್ಕಳಿಗೆ ಬಿಟ್ಟಿದ್ದು.

ಬಿಕಿನಿಯಾದರೂ ಧರಿಸಲಿ, ಮುಸುಕು ಆದರೂ ಧರಿಸಲಿ, ಜೀನ್ಸ್ ಆದರೂ ಹಾಕಲಿ. ಇಲ್ಲವೇ ಹಿಜಾಬ್ ಆದರೂ ಹಾಕಲಿ ಅವರಿಗೆ ಬೇಕಾದ ಬಟ್ಟೆ ಧರಿಸುವುದು ಅವರ ಹಕ್ಕಾಗಿರುತ್ತದೆ. ಭಾರತದ ಸಂವಿಧಾನವೇ ಇಂತಹ ಹಕ್ಕು ನೀಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯ ರುಂಡ ಕತ್ತರಿಸಿ ಬೀದಿಯಲ್ಲಿ ಪ್ರದರ್ಶಿಸಿದ ಪತಿ..!