Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಜಿಎಸ್ ಟಿ ಪ್ರಚಾರ ರಾಯಭಾರಿಯಿಂದ ಅಮಿತಾಬ್ ಹಿಂದೆ ಸರಿಯುವರೇ..?

ಜಿಎಸ್ ಟಿ ಪ್ರಚಾರ ರಾಯಭಾರಿಯಿಂದ ಅಮಿತಾಬ್ ಹಿಂದೆ ಸರಿಯುವರೇ..?
ನವದೆಹಲಿ , ಗುರುವಾರ, 22 ಜೂನ್ 2017 (08:42 IST)
ಮುಂಬೈ:ಜಿಎಸ್‌ಟಿ ಪ್ರಚಾರಾಭಿಯಾನದಿಂದ ದೂರ ಸರಿಯಿರಿ ಎಂದು ಬಾಲಿವುಡ್‌ನ‌ ಬಿಗ್‌ ಬಿ ಅಮಿತಾಭ್‌ ಬಚ್ಚನ್‌ಗೆ ಹೇಳುವ ಮೂಲಕ ಕಾಂಗ್ರೆಸ್‌ ನಾಯಕ ಸಂಜಯ್‌ ನಿರುಪಮ್‌ ವಿವಾದ ಸೃಷ್ಟಿಸಿದ್ದಾರೆ.
 
ಜಿಎಸ್‌ಟಿ ಮೂಲತಃ ಕಾಂಗ್ರೆಸ್‌ನ ಯೋಜನೆಯಾಗಿತ್ತು. ಬಿಜೆಪಿ ವಿರೋಧ ಪಕ್ಷದಲ್ಲಿದ್ದಷ್ಟು  ಕಾಲವೂ ಅದು ಜಿಎಸ್‌ಟಿ ಯನ್ನು ವಿರೋಧಿಸುತ್ತಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಮೂಲ ಜಿಎಸ್‌ಟಿಯನ್ನು ಸಡಿಲುಗೊಳಿಸಿ ಜಾರಿಗೆ ತರಲು ಮುಂದಾಯಿತು; ಇದು ನಮಗೆ ಸ್ವೀಕಾರಾರ್ಹವಾಗಿರಲಿಲ್ಲ' ಎಂದು ನಿರುಪಮ್‌ ತಿಳಿಸಿದ್ದಾರೆ. ಇಡಿಯ ದೇಶಕ್ಕೆ ಏಕರೂಪದ ತೆರಿಗೆಯಾಗಿ ಜಿಎಸ್‌ಟಿಯನ್ನು ತರಲು ಕಾಂಗ್ರೆಸ್‌ ಬಯಸಿತ್ತು. ಆದರೆ ಬಿಜೆಪಿ ಅದನ್ನು ನಾಲ್ಕು ಹಂತಗಳ ತೆರಿಗೆ ಮತ್ತು ಮೂರು ವಿವಿಧ ಬಗೆಯ ಉಪ ನಮೂನೆಯೊಂದಿಗೆ ಜಾರಿಗೆ ತರುತ್ತಿದೆ ಎಂಬುದು ಅವರ ಆಕ್ಷೇಪ. 
 
ಜಿಎಸ್‌ಟಿ ಮುಂಬರುವ ದಿನಗಳಲ್ಲಿ ವಾಪಾರಿ ವರ್ಗದವರ ಆಕ್ರೋಶಕ್ಕೆ ಗುರಿಯಾಗುವುದು ನಿಶ್ಚಿತ; ಹಾಗಾಗಿ ಅವರ ವಿರೋಧವನ್ನು ಕಟ್ಟಿಕೊಳ್ಳದಿರುವುದೇ ಲೇಸು ಮತ್ತು ಬಿಜೆಪಿಯ ಮೂರ್ಖತನದಲ್ಲಿ ಅಮಿತಾಬ್ ಬಚ್ಚನ್  ಭಾಗಿಯಾಗಬಾರದು. ಅಮಿತಾಭ್‌  ಈಗಿಂದಲೇ ಜಿಎಸ್‌ಟಿ ಪ್ರಚಾರಾಭಿಯಾನದಿಂದ ದೂರ ಸರಿಯಿರಿ; ನೀವು ಎಲ್ಲರಿಗೂ ತಿಳಿದಿರುವ ಮತ್ತು ಅತ್ಯಂತ ಘನತೆವೆತ್ತ ವ್ಯಕ್ತಿ; ಮೇಲಾಗಿ ನಾನು ನಿಮ್ಮ ಅಭಿಮಾನಿ ಎಂದು ಹೇಳಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಜಿಎಸ್ ಟಿ ಪ್ರಚಾರ ರಾಯಭಾರಿಯಿಂದ ಅಮಿತಾಬ್ ಹಿಂದೆ ಸರಿಯುವರೇ..?