ಮುಂಬೈ : ದೇಶೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ಷೇರು ಮಾರುಕಟ್ಟೆಯಲ್ಲಿ ರಕ್ತಪಾತವಾಗಿದೆ.
ಬಾಂಬೆ ಷೇರು ಮಾರುಕಟ್ಟೆ ಸಂವೇದಿ ಸೂಚಂಕ್ಯ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚಂಕ್ಯ ನಿಫ್ಟಿ ಅಂಕಗಳು ಭಾರೀ ಇಳಿಕೆಯಾಗಿದ್ದರಿಂದ ಒಂದೇ ದಿನ ಹೂಡಿಕೆದಾರರು ಸುಮಾರು 7 ಲಕ್ಷ ಕೋಟಿ ರೂ. ಕಳೆದುಕೊಂಡಿದ್ದಾರೆ.
ಶುಕ್ರವಾರ 58,098 ಅಂಕದಲ್ಲಿ ಕೊನೆಯಾಗಿದ್ದ ಸೆನ್ಸೆಕ್ಸ್ ಇಂದು ಆರಂಭದ ಎರಡು ಗಂಟೆಯಲ್ಲಿ 1 ಸಾವಿರ ಅಂಕ ಇಳಿಕೆಯಾಗಿತ್ತು. ಬಳಿಕ ನಿಧನವಾಗಿ ಚೇತರಿಕೆ ಕಂಡಿತು. ಅಂತಿಮವಾಗಿ 953 ಅಂಕ ಇಳಿಕೆಯಾಗಿ ದಿನದ ಕೊನೆಯಲ್ಲಿ 57,145 ಅಂಕಗಳಿಗೆ ವ್ಯವಹಾರವನ್ನು ಕೊನೆಗೊಳಿಸಿತು.
ಶುಕ್ರವಾರ 17,327 ಅಂಕದಲ್ಲಿ ಕೊನೆಯಾಗಿದ್ದ ನಿಫ್ಟಿ ಇಂದು 311ಅಂಕ ಇಳಿಕೆಯಾಗಿ 17,016 ಅಂಕಗಳಿಗೆ ಕೊನೆಯಾಯಿತು.