ವಿಧಾನಸಭೆ ಇತಿಹಾಸದಲ್ಲಿ ಎಂದು ನಡೆಯದಂತಹ ಅಸಹ್ಯಕರ ಘಟನೆ ತಮಿಳುನಾಡು ವಿಧಾನಸಭೆಯಲ್ಲಿ ನಡೆದಿದೆ. ಸಿಎಂ ಪಳನಿಸ್ವಾಮಿ ವಿಶ್ವಾಸಮತ ಯಾಚನೆ ವೇಳೆ ಗೌಪ್ಯ ಮತದಾನಕ್ಕೆ ಒಪ್ಪದ ಸ್ಪೀಕರ್ ವಿರುದ್ಧ ಡಿಎಂಕೆ ಶಾಸಕರು ರೋಷಾವೇಶ ತೋರಿಸಿದ್ದಾರೆ. ಕುರ್ಚಿ ಮುರಿದು ಗದ್ದಲ ನಡೆಸಿದ್ದಾರೆ. ಸದನ ಮುಂದೂಡಿ ಸ್ಪೀಕರ್ ತೆರಳಿದ ಬಳಿಕ ಸ್ಪೀಕರ್ ಕುರ್ಚಿ ಮೇಲೆ ಒಬ್ಬರಾದ ಮೇಲೆ ಒಬ್ಬರು ಶಾಸಕರು ಬಂದು ಕೂರುವ ಮೂಲಕ ಅಸಹ್ಯಕರ ವರ್ತನೆ ತೋರಿದ್ದಾರೆ.
ಸದನ ಆರಂಭವಾದ ಬಳಿಕ ವಿಧಾನಸಭೆಯಲ್ಲಿ ಸ್ಪೀಕರ್ ಧನ್ ಪಾಲ್ ತಮ್ಮ ನೋವು ತೋಡಿಕೊಮಡಿದ್ದಾರೆ. ನನ್ನ ಮೇಲೆ ಕುರ್ಚಿ ಎಸೆದರು. ಅವಾಚ್ಯ ಶಬ್ದಗಳಿಂದ ಬೈದರು. ಬಟ್ಟೆ ಹರಿದುಹಾಕಿದರು. ನಾನೇನು ಮಾಡಲಿ, ಯಾರ ಬಳಿ ಹೇಳಿಕೊಳ್ಳಲಿ ಎಂದು ಅಳಲು ತೋಡಿಕೊಂಡಿದ್ದಾರೆ.