ನವದೆಹಲಿ: ತಂದೆಗೆ ವಿಚ್ಛೇದನ ಕೊಡಲಿಲ್ಲವೆಂಬ ಕಾರಣಕ್ಕೆ ತಾಯಿಯನ್ನೇ ಹೆತ್ತಮಗ ಹತ್ಯೆ ಮಾಡಿದ ಘಟನೆ ನವದೆಹಲಿಯಲ್ಲಿ ನಡೆದಿದೆ.
ಈ ಸಂಬಂಧ 17 ವರ್ಷದ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ. ತಂದೆ ತಾಯಿಯ ವಿರುದ್ಧ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು. ಆದರೆ ಇದಕ್ಕೆ ಸಹಿ ಹಾಕಲು ತಾಯಿ ನಿರಾಕರಿಸಿದ್ದರು. ಇವರಿಬ್ಬರ ದಾಂಪತ್ಯ ಕಲಹದ ಬಗ್ಗೆ ಸ್ನೇಹಿತರು ಪುತ್ರನನ್ನು ಲೇವಡಿ ಮಾಡುತ್ತಿದ್ದರು. ಇದರಿಂದ ಆಕ್ರೋಶಕ್ಕೊಳಗಾದ ಪುತ್ರ ಈ ಕೃತ್ಯವೆಸಗಿದ್ದಾನೆ.