ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸೀಮಿತ ದಾಳಿ ನಡೆಸಿದ ಕ್ರೆಡಿಟ್ ಧೀರ ಯೋಧರಿಗೆ ಸಲ್ಲಬೇಕು, ಬಿಜೆಪಿ ನೇತೃತ್ವದ ಕೇಂದ್ರ ಸ್ರಕಾರಕ್ಕೆ ಅಥವಾ ಪ್ರಧಾನಿ ಮೋದಿ ಅವರಿಗಲ್ಲ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ, ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.
ಪಾಟ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಸೆಪ್ಟೆಂಬರ್ 29ರಂದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸೀಮಿತ ದಾಳಿ ನಡೆಸಿದ ಕ್ರೆಡಿಟ್‌ನ್ನು ತನಗೆ ಸಲ್ಲಬೇಕು ಎಂದು ಬಿಜೆಪಿ ಶತ ಪ್ರಯತ್ನ ನಡೆಸುತ್ತಿದೆ. ಆದರೆ ನಿಜವಾಗಿಯೂ ಈ ಕ್ರೆಡಿಟ್ ಸಲ್ಲಬೇಕಾಗಿರುವುದು ಭಾರತೀಯ ಸೈನ್ಯಕ್ಕೆ ಎಂದು ಲಾಲು ಪ್ರತಿಪಾದಿಸಿದ್ದಾರೆ.
ಆದರೆ ಸೀಮಿತ ದಾಳಿ ನಡೆದಿರುವುದು ಇದೇ ಪ್ರಥಮ ಬಾರಿ ಎಂಬ ವಾದವನ್ನು ಅವರು ತಳ್ಳಿ ಹಾಕಿದ್ದಾರೆ.
ಸೀಮಿತ ದಾಳಿ ಕ್ರೆಡಿಟ್ ಪಡೆಯಲು ಬಿಜೆಪಿ ತನ್ನ ಬಣ್ಣವನ್ನು ಬಯಲು ಮಾಡಿಕೊಂಡಿದೆ. ವಾಸ್ತವವೆಂದರೆ ಈ ಹಿಂದೆ ಕೂಡ ಸೀಮಿತ ದಾಳಿ ನಡೆದಿತ್ತು. ಅಗತ್ಯ ಬಿದ್ದರೆ ಭವಿಷ್ಯದಲ್ಲಿ ಕೂಡ ನಡೆಯಬಹುದು ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ