ಜಮ್ಮು ಮತ್ತು ಕಾಶ್ಮೀರದಲ್ಲಿನ ಸೇನಾ ಶಿಬಿರದ ಮೇಲೆ ಸಂಭವಿಸಿದ ಹಿಮಪಾತದಲ್ಲಿ ಸಾವನ್ನಪ್ಪಿದ ಸೈನಿಕರ ಸಂಖ್ಯೆ 14ಕ್ಕೇರಿದೆ. ಅದರಲ್ಲಿ ಹಾಸನದ ಸೈನಿಕನೂ ಇದ್ದಾನೆ.
ಗಡಿ ನಿಯಂತ್ರಣ ರೇಖೆಯ ಬಂಡಿಪೋರಾ ಜಿಲ್ಲೆಯ ಗುರೇಜ್ ಹಾಗೂ ಸೋನ್ಮಾರ್ಗ್ ಸೆಕ್ಟರ್ಗಳಲ್ಲಿರುವ ಸೇನಾ ಶಿಬಿರಗಳ ಮೇಲೆ ಜನವರಿ 25 ರಂದು ಹಿಮಪಾತ ಸಂಭವಿಸಿತ್ತು.
ಪ್ರತಿಕೂಲ ಹವಾವಾನ ಲೆಕ್ಕಿಸದೇ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು. ಕಿರಿಯ ಅಧಿಕಾರಿ ಸೇರಿದಂತೆ 7 ಯೋಧರನ್ನು ರಕ್ಷಣೆ ಮಾಡುವಲ್ಲಿ ಸೇನೆ ಯಶಸ್ವಿಯಾಗಿತ್ತು.
ಇಂದು ರಕ್ಷಣಾ ಕಾರ್ಯಾಚರಣೆ ಕೊನೆಗೊಂಡಿದ್ದು ಒಟ್ಟು 14 ಶವಗಳನ್ನು ಹೊರತೆಗೆಯಲಾಗಿದೆ.
ಮೃತಪಟ್ಟವರಲ್ಲಿ ಹಾಸನದ ಶಾಂತಿ ಗ್ರಾಮ ಹೋಬಳಿ ದೇವಿಹಳ್ಳಿ ನಿವಾಸಿ ಸೈನಿಕ ಸಂದೀಪ್ (28) ಕೂಡ ಇದ್ದು ಮುಂದಿನ ವಾರ ಈತ ಮನೆಗೆ ಮರಳುವವನಿದ್ದ ಎಂದು ತಿಳಿದು ಬಂದಿದೆ. 8 ವರ್ಷಗಳ ಹಿಂದೆ ಸೈನ್ಯ ಸೇರಿದ್ದ ಈತನಿಗೆ ಫೆಬ್ರವರಿ 22ಕ್ಕೆ ಮದುವೆ ನಿಶ್ಚಯವಾಗಿತ್ತು.
ದುರ್ಘಟನೆಗೆ ಬಲಿಯಾಗುವ ಮುನ್ನ ಮನೆಗೆ ಫೋನ್ ಕರೆ ಮಾಡಿದ್ದ ಸಂದೀಪ್ ಹಿಮಪಾತವಾಗುತ್ತಿರುವ ಬಗ್ಗೆ ಹೇಳಿದ್ದ. ಫೆಬ್ರವರಿ 8 ಅಥವಾ 9 ಕ್ಕೆ ಮನೆಗೆ ಬರುತ್ತೇನೆ. ಶಬರಿಮಲೆಗೆ ಹೋಗಬೇಕು ಎಂದಿದ್ದ ಎಂದು ಆತನ ಸಂಬಂಧಿಕರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ