ಹೂಕೋಸಿನಲ್ಲಿ ಹುಳಗಳು ವಿಪರೀತವಾಗಿರುತ್ತದೆ. ಹೀಗಾಗಿ ಅದನ್ನು ಅರಿಸಿಣ ಉಪ್ಪು ಬೆರೆಸಿದ ನೀರಲ್ಲಿ ಕೆಲಕಾಲ ನೆನಸಿಟ್ಟು ಹುಳ ಹೋದ ಮೇಲೆ ಬಳಸಬೇಕು ಎನ್ನುತ್ತಾರೆ. ಆದರೆ ಬಿಹಾರದ ದರ್ಭಾಂಗ್‌ನಲ್ಲಿ ಹೂಕೋಸು ಕೊಂಡು ತಂದವರೊಬ್ಬರು ಅದನ್ನು ಅಡುಗೆ ಮನೆಯಲ್ಲಿಟ್ಟ ಬಳಿಕ ಒಂದು ಕ್ಷಣ ಹೌಹಾರಿ ಹೋದರು.
ಅವರು ಮಾರ್ಕೆಟ್‌ನಿಂದ ತಂದ ಹೂಕೋಸಲ್ಲಿ ದೊಡ್ಡ ಗಾತ್ರದ ಹುಳವೊಂದು ಕಂಡಿತ್ತು. ಹತ್ತಿರದಿಂದ ಪರಿಶೀಲಿಸಿದಾಗ ಅದು ಹುಳವಲ್ಲ. ಹಾವೊಂಬುದು ಗಮನಕ್ಕೆ ಬಂತು.
ಅದರ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ ಅವರು. ಈ ಫೋಟೋ ಈಗ ವೈರಲ್ ಆಗಿ ಹರಿದಾಡುತ್ತಿದೆ.
ಈ ಕುರಿತು ರೈತರೋರ್ವರನ್ನು ವಿಚಾರಿಸಿದಾಗ ಈಗ ಚಳಿಗಾಲವಿರುವುದರಿಂದ ಕ್ರಿಮಿಕೀಟಗಳು ತಮಗೆ ಸೂಕ್ತವೆನಿಸಿದ ಕಡೆಗಳಲ್ಲಿ ಆಶ್ರಯ ಪಡೆಯುತ್ತವೆ. ಅದೇ ರೀತಿ ಈ ಹಾವು ಸಹ ಹೂಕೋಸಿನಲ್ಲಿ ಸೇರಿಕೊಂಡಿರಬೇಕು ಅನ್ನುತ್ತಾರೆ.