2008ರ ದೇಶದ್ರೋಹಿ ಪ್ರಕರಣದಡಿ ನಿಷೇಧಿತ ಸಿಮಿ ಸಂಘಟನೆ ಮುಖ್ಯಸ್ಥ ಸಫ್ದಾರ್ ಹುಸೇನ್ ನಗೋರಿ ಸೇರಿದಂತೆ 11 ಉಗ್ರರಿಗೆ ಜೀವಾವಧಿ ಶಿಕ್ಷೆ ನೀಡಿ ಇಂಧೋರ್`ನ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಶಿಕ್ಷೆಗೆ ಗುರಿಯಾದ 10 ಅಪರಾಧಿಗಳು ಸಬರಮತಿ ಜೈಲಿನಲ್ಲಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕವೇ ತೀರ್ಪಿನ ಮಾಹಿತಿ ನೀಡಲಾಗಿದೆ.
ದೇಶದ್ರೋಹ, ಭಯೋತ್ಪಾದಕ ಚಟುವಟಿಕೆ, ಅಕ್ರಮ ಶಸ್ತ್ರಾಸ್ತ್ರ, ಧರ್ಮ ಆಧರಿತ ಪ್ರತ್ಯೇಕ ಸಂಘಟನೆಗಳ ಮಧ್ಯೆ ವೈರತ್ವ ಸೃಷ್ಟಿ ಯತ್ನ ಮತ್ತು ಕಾನೂನು ವಿರೋಧಿ ಚಟುವಟಿಕೆಯಡಿ ಶಿಕ್ಷೆ ವಿಧಿಸಲಾಗಿದೆ.
ಸಫ್ದಾರ್ ಹುಸೇನ್ ನಗೋರಿ, ಹಫೀಜ್ ಹುಸೇನ್(35), ಅಮಿಲ್ ಪರ್ವೇಜ್(40), ಶಿವ್ಲಿ(38), ಖಮರುದ್ದೀನ್(42), ಶಹ್ದೂಲಿ(32), ಖಮ್ರಾನ್(40), ಅನ್ಸಾರ್(35), ಅಹಮ್ಮದ್ ಬೇಗ್(32), ಯಾಸಿನ್(35), ಮತ್ತು ಮುನ್ರೋಜ್(40) ಶಿಕ್ಷೆಗೊಳಗಾದ ಉಗ್ರರು.