ಕೆರೆ ಅಭಿವೃದ್ಧಿ, ಮೂಲ ಸೌಕರ್ಯ ಸೇರಿದಂತೆ ಬೆಂಗಳೂರು ನಗರದ ಅಭಿವೃದ್ಧಿಗೆ ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್`ನಲ್ಲಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ನಮ್ಮ ಕ್ಯಾಂಟೀನ್ ಮೂಲಕ ಕಡಿಮೆ ದರದ ಊಟದ ಸೌಲಭ್ಯ ನೀಡಲಾಗಿದೆ. ಮೆಟ್ರೋ, ರೈಲು ಅಭಿವೃದ್ಧಿಗೂ ಗಮನಹರಿಸಲಾಗಿದೆ.
- ಬೆಂಗಳೂರು ನಗರ ಅಭಿವೃದ್ಧಿಗೆ 7,300 ಕೋಟಿ ರೂ.
- 5 ರೂಪಾಯಿಗೆ ತಿಂಡಿ, 10 ರೂಪಾಯಿಗೆ ಊಟ. 198 ವಾರ್ಡ್`ಗಳಲ್ಲಿ ಜನಪ್ರಿಯ ನಮ್ಮ ಕ್ಯಾಂಟೀನ್ ಯೋಜನೆ
- 2 ಸ್ಟ್ರೋಕ್ ಆಟೋ ರದ್ದು, 4 ಎಲ್`ಪಿಜಿ ಆಟೋಗಳಿಗೆ 10 ಸಾವಿರ ಸಹಾಯಧನ
- 690 ಕೋಟಿ ರೂಪಾಯಿ ವೆಚ್ಚದಲ್ಲಿ 80 ಕಿ.ಮೀ ಉದ್ದದ್ದ 43 ಪ್ರಮುಖ ರಸ್ತೆಗಳ ಅಭಿವೃದ್ಧಿ
- ಟೆಂಡರ್ ಶ್ಯೂರ್ ಮಾದರಿಯ 25 ಕಿ.ಮೀ ಉದ್ದದ 25 ರಸ್ತೆಗಳು ಮೇಲ್ದರ್ಜೆಗೆ
- ಮಳೆನೀರು ಚರಂಡಿಗಳ ಅಭಿವೃದ್ಧಿಗೆ 300 ಕೋಟಿ ರೂಪಾಯಿ
- 50 ಕೋಟಿ ವೆಚ್ಚದಲ್ಲಿ ಸಾರ್ವಜನಿಕ ಶೌಚಾಲಯಗಳ ನಿರ್ಮಾಣ
- ಬೆಂಗಳೂರಿನ ಆಯ್ದ ಕ್ಲಸ್ಟರ್`ಗಳಲ್ಲಿ ಬಾಡಿಗೆ ಸೈಕಲ್ ಒದಗಿಸುವ ಯೋಜನೆ ಅರಂಭ
- ಎಲ್ಲರಿಗೂ ಸೂರು’ ಅಭಿಯಾನದಡಿ ನಗರ ಸ್ಥಳೀಯ ಸಂಸ್ಥೆಗಳು ಮತ್ತು ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ 60,000 ಮನೆಗಳ ನಿರ್ಮಾಣ
- 42 ಕೋಟಿ ರೂ. ವೆಚ್ಚದಲ್ಲಿ ನಗರದ 10 ಕೆರೆಗಳ ಅಭಿವೃದ್ಧಿ, ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಸಮಗ್ರ ಅಭಿವೃದ್ಧಿಗೆ ಕ್ರಮ
- ಬೆಂಗಳೂರಿನಲ್ಲಿ ಉಪನಗರ ರೈಲು ಯೋಜನೆ ಜಾರಿ