Webdunia - Bharat's app for daily news and videos

Install App

ಬ್ಯಾಂಕ್‌ನಲ್ಲಿ ಗುಂಡಿನ ದಾಳಿ! 5 ಮಂದಿ ಸಾವು, 9 ಮಂದಿಗೆ ಗಾಯ

Webdunia
ಮಂಗಳವಾರ, 11 ಏಪ್ರಿಲ್ 2023 (11:48 IST)
ನ್ಯೂಯಾರ್ಕ್ : ಅಮೆರಿಕದ ಗುಂಡಿನ ದಾಳಿಗಳು ಸಾಮಾನ್ಯ ಎನ್ನುವಂತಾಗಿಬಿಟ್ಟಿದೆ. ಇಲ್ಲಿನ ಕೆಂಟುಕಿಯ ಲೂಯಿಸ್ವಿಲ್ಲೆಯಲ್ಲಿರುವ ಬ್ಯಾಂಕ್ನಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಐವರು ಸಾವನ್ನಪ್ಪಿದ್ದು, ಒಂಭತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಲೂಯಿಸ್ವಿಲ್ಲೆ ಮೆಟ್ರೋ ಪೊಲೀಸ್ ಇಲಾಖೆಯ ಹಂಗಾಮಿ ಮುಖ್ಯಸ್ಥ ಜಾಕ್ವೆಲಿನ್ ಗ್ವಿನ್-ವಿಲ್ಲರೊಯೆಲ್, ಗುಂಡಿನ ದಾಳಿ ನಡೆಸಿದ್ದ ಬಂದೂಕುಧಾರಿಯನ್ನು ಪೊಲೀಸರು ಹತ್ಯೆ ಮಾಡಿದ್ದಾರೆ ಎಂದು ಹೇಳಿದ್ದಾರೆ. 

ಬ್ಯಾಂಕ್ನಲ್ಲಿ ಗುಂಡಿನ ದಾಳಿಯಾಗುತ್ತಿದೆ ಎಂದು ಬಗ್ಗೆ ಪೊಲೀಸರಿಗೆ ಕರೆಬಂದಿತ್ತು. ತಕ್ಷಣ ಸ್ಥಳಕ್ಕೆ ತೆರಳಿದ ಪೊಲೀಸರು ಹೆಚ್ಚಿನ ಅನಾಹುತ ಸಂಭವಿಸುವುದನ್ನು ತಪ್ಪಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಐವರು ಮೃತಪಟ್ಟಿದ್ದಾರೆ.

ಶೂಟರ್, 23 ವರ್ಷದ ಕಾನರ್ ಸ್ಟರ್ಜನ್ ಎಂದು ಗುರುತಿಸಲಾಗಿದೆ. ಈತ ಬ್ಯಾಂಕ್ ಉದ್ಯೋಗಿಯಾಗಿದ್ದ. ತಾನು ಕೆಲಸ ಮಾಡುತ್ತಿದ್ದ ಓಲ್ಡ್ ನ್ಯಾಷನಲ್ ಬ್ಯಾಂಕ್ನಲ್ಲೇ ಗುಂಡಿನ ದಾಳಿ ನಡೆಸಿದ್ದಾನೆ. ಗುಂಡಿನ ದಾಳಿಯಲ್ಲಿ ಜೋಶುವಾ ಬ್ಯಾರಿಕ್, ಥಾಮಸ್ ಎಲಿಯಟ್, ಜೂಲಿಯಾನಾ ಫಾರ್ಮರ್, ಜೇಮ್ಸ್ ಟಟ್ ಹತ್ಯೆಗೀಡಾಗಿದ್ದಾರೆ. ಮತ್ತೊಬ್ಬರ ಗುರುತು ಸಿಕ್ಕಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments