Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಂಸದರ ಬಗ್ಗೆ ಶಾಕಿಂಗ್ ಸತ್ಯ ಹೊರತಂದ ಸಮೀಕ್ಷೆ

ಸಂಸದರ ಬಗ್ಗೆ ಶಾಕಿಂಗ್ ಸತ್ಯ ಹೊರತಂದ ಸಮೀಕ್ಷೆ
ನವದೆಹಲಿ , ಗುರುವಾರ, 31 ಆಗಸ್ಟ್ 2017 (09:44 IST)
ನವದೆಹಲಿ: ನಮ್ಮ ದೇಶದ ಸಂಸದರಲ್ಲಿ ಹೆಚ್ಚಿನವರು ಅಪರಾಧ ಹಿನ್ನಲೆಯುಳ್ಳವರು ಎಂಬುದು ಇದೀಗ ಗುಟ್ಟಾಗಿ ಉಳಿದಿಲ್ಲ. ಆದರೆ 51 ಸಂಸದರು ಮಹಿಳೆಯರ ವಿರುದ್ಧ ಒಂದಲ್ಲಾ ಒಂದು ರೀತಿ ದೌರ್ಜನ್ಯ ನಡೆಸಿದ ಕ್ರಿಮಿನಲ್ ಗಳೇ ಅಂತೆ!

 
ಹಾಗಂತ ಎಡಿಆರ್ ಎಂಬ ಸ್ವಯಂ ಸಂಘ ನಡೆಸಿದ ಸಮೀಕ್ಷೆ ಸತ್ಯ ಹೊರಹಾಕಿದೆ. ಪ್ರಸಕ್ತ ನಮ್ಮ ದೇಶದಲ್ಲಿ 774 ಸಂಸದರು ಮತ್ತು 4,078 ಶಾಸಕರಿದ್ದಾರೆ. ಇವರ ಪೈಕಿ 1581 ಮಂದಿ ಅಪರಾಧ ಚಟುವಟಿಕೆಯಲ್ಲಿ ಸಿಕ್ಕಿ ಹಾಕಿಕೊಂಡವರು.

ಇವರ ಪೈಕಿ 51 ಸಂಸದರು ಮತ್ತು ಶಾಸಕರು ಮಹಿಳೆಯರ ವಿರುದ್ಧ ದೌರ್ಜನ್ಯವೆಸಗಿದವರು. ಅವರಲ್ಲಿ ನಾಲ್ವರ ಮೇಲೆ ಅತ್ಯಾಚಾರ ಆರೋಪವಿದೆ ಎಂದು ತಿಳಿದು ಬಂದಿದೆ. 334 ಮಂದಿ ಸಂಸದರು ಮತ್ತು ಶಾಸಕರಿಗೆ ತಮ್ಮ ತಮ್ಮ ರಾಜಕೀಯ ಪಕ್ಷಗಳು ಅಪರಾಧ ಹಿನ್ನಲೆಯಿದ್ದರೂ ಚುನಾವಣೆಗೆ ಟಿಕೆಟ್ ನೀಡಿದೆ ಎಂದೂ ತಿಳಿದುಬಂದಿದೆ.

ಬಿಜೆಪಿ ಪಕ್ಷದಲ್ಲಿ ಅತೀ ಹೆಚ್ಚು ಮಂದಿ ಮಹಿಳೆಯರ ವಿರುದ್ಧ ದೌರ್ಜನ್ಯವೆಸಗಿದ ಆರೋಪ ಹೊಂದಿರುವ ಶಾಸಕರು ಮತ್ತು ಸಂಸದರಿದ್ದಾರೆ. ಬಿಜೆಪಿಯಲ್ಲಿ ಒಟ್ಟು 14 ಮಂದಿ ಇಂತಹ ರಾಜಕಾರಣಿಗಳಿದ್ದಾರೆ. ಇನ್ನು ದ್ವಿತೀಯ  ಸ್ಥಾನ ಶಿವಸೇನೆ (7), ತೃತೀಯ ಸ್ಥಾನ (6) ಕಾಂಗ್ರೆಸ್ ಗಿದೆ.

ಇದನ್ನೂ ಓದಿ.. ಮುಂಬೈ ಮಳೆ ಸಂತ್ರಸ್ತರ ನೆರವಿಗೆ ಸಚಿನ್ ತೆಂಡುಲ್ಕರ್ ರದ್ದು ಹೀಗೊಂದು ಸೇವೆ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇನ್ನು ಇಂದಿರಾ ಕ್ಯಾಂಟೀನ್ ಇಲ್ಲೂ ಲಭ್ಯ!