ಮಧ್ಯಪ್ರದೇಶದ ಶಪೋರ್‌ನಲ್ಲಿ ಬ್ಯಾಂಕ್‌ನಿಂದ ರೈತನೋರ್ವ ವಿತ್ ಡ್ರಾ ಮಾಡಿದ 2,000 ರೂಪಾಯಿ ನೋಟಿನಲ್ಲಿ ಗಾಂಧಿ ತಾತನ ಚಿತ್ರವೇ ನಾಪತ್ತೆಯಾಗಿದೆ.
ನಗರದ ಸ್ಟೇಟ್ ಬ್ಯಾಂಕ್ ಇಂಡಿಯಾದಿಂದ ರೈತ ಈ ಹಣವನ್ನು ಪಡೆದಿದ್ದರು.
ಈ ಕುರಿತು ಸ್ಪಷ್ಟನೆ ನೀಡಿರುವ ಎಸ್‌ಬಿಐ ಅಧಿಕಾರಿ ಆರ್.ಕೆ ಜೈನ್ ಇದು ನಕಲಿ ನೋಟಲ್ಲ, ಮುದ್ರಣ ಮಾಡುವಾಗ ಆದ ತಪ್ಪಿದು. ಇಂತಹ ನೋಟುಗಳನ್ನು ತನಿಖೆಗೆ ಕಳುಹಿಸಲಾಗಿದೆ ಎಂದಿದ್ದಾರೆ.
ಮಾಧ್ಯಮ ಮತ್ತು ಪೊಲೀಸ್ ಮೂಲಗಳ ಪ್ರಕಾರ ಈ ಪ್ರದೇಶದಲ್ಲಿ ಇಂತಹ ಅನೇಕ ನೋಟುಗಳು ಹರಿದಾಡುತ್ತಿವೆ.