ನವದೆಹಲಿ: ಭಾರತದಲ್ಲಿ ಮುಸ್ಲಿಂ ಮಹಿಳೆಯರು ಸಾಂಪ್ರದಾಯಿಕವಾಗಿ ಧರಿಸುವ ಬುರ್ಖಾ ನಿಷೇಧಿಸಲು ಪ್ರಧಾನಿ ಮೋದಿಗೆ ಶಿವಸೇನೆ ಆಗ್ರಹಿಸಿದೆ.
ಶ್ರೀಲಂಕಾದಲ್ಲಿ ಉಗ್ರರ ದಾಳಿಯ ನಂತರ ಬುರ್ಖಾಗೆ ನಿಷೇಧ ಹೇರಲಾಗಿದೆ. ಇದರ ಬೆನ್ನಲ್ಲೇ ಭಾರತದಲ್ಲೂ ಉಗ್ರ ಚಟುವಟಿಕೆ ದಮನಿಸಲು ಬುರ್ಖಾಗೆ ನಿಷೇಧ ಹೇರಬೇಕು ಎಂದು ಶಿವಸೇನೆ ಆಗ್ರಹಿಸಿದೆ.
ಬುರ್ಖಾ ಧರಿಸಿದರೆ ಮುಸ್ಲಿಂ ಮಹಿಳೆಯರ ಮುಖ ಪರಿಚಯ ಸಿಗುವುದಿಲ್ಲ. ಇದನ್ನೇ ಕೆಲವು ಉಗ್ರರು ದುರುದ್ದೇಶಕ್ಕೆ ಬಳಸುತ್ತಾರೆ. ಹೀಗಾಗಿ ಉಗ್ರ ಚಟುವಟಿಕೆ ನಿಯಂತ್ರಿಸಲು ಬುರ್ಖಾಗೂ ನಿಷೇಧ ಹೇರಬೇಕು ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಆಗ್ರಹಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ