Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಾಮಮಂದಿರ ನಿರ್ಮಾಣ ಆರಂಭಿಸಿ: ಕೇಂದ್ರಕ್ಕೆ ಶಿವಸೇನೆ ಆಗ್ರಹ

ರಾಮಮಂದಿರ ನಿರ್ಮಾಣ ಆರಂಭಿಸಿ: ಕೇಂದ್ರಕ್ಕೆ ಶಿವಸೇನೆ ಆಗ್ರಹ
ಮುಂಬೈ , ಗುರುವಾರ, 13 ಅಕ್ಟೋಬರ್ 2016 (16:51 IST)
ಕೇವಲ ಘೋಷಣೆ ಕೂಗುವುದನ್ನು ನಿಲ್ಲಸಿ, ರಾಮ ಮಂದಿರ ನಿರ್ಮಾಣಕ್ಕೆ ಅಡಿಗಲ್ಲನ್ನಿಡಿ ಎಂದು ಶಿವಸೇನೆ ಗುರುವಾರ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದೆ. ಬಿಜೆಪಿ ಹಿರಿಯ ನಾಯಕ, ರಾಜ್ಯಸಭಾ ಸಂಸದ ಉತ್ತರ ಪ್ರದೇಶ ಚುನಾವಣೆಯಲ್ಲಿ ರಾಮ ಮಂದಿರ ನಿರ್ಮಾಣ ವಿಷಯವನ್ನು ಅಸ್ತ್ರವಾಗಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದ ಹಿನ್ನೆಲೆಯಲ್ಲಿ ಸೇನೆ ಈ ಪಟ್ಟು ಹಿಡಿದಿದೆ. 
ತನ್ನ ಮುಖವಾಣಿ ಸಾಮ್ನಾದಲ್ಲಿ ಸೇನೆ, ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಿಜೆಪಿಗೆ ಸವಾಲೆಸೆದಿದ್ದು, ಇದಕ್ಕೆ ಸಂಬಂಧಿಸಿದಂತೆ 300 ಸಂಸದರು ಪ್ರಧಾನಿಗೆ ಬೆಂಬಲ ನೀಡಿದ್ದನ್ನು ಸ್ಮರಿಸಿಕೊಂಡಿದೆ. 
 
300 ಸಂಸದರ ಬೆಂಬಲದೊಂದಿಗೆ ನೀವು ರಾಮ ಮಂದಿರವನ್ನು ನಿರ್ಮಿಸಲು ಮುಂದಾಗುವುದಿಲ್ಲವೆಂದರೆ ಮತ್ತೆ ಯಾವಾಗ ಇದನ್ನು ಕೈಗೆತ್ತಿಕೊಳ್ಳುತ್ತಿರಿ ಎಂದು ಸೇನೆ ತನ್ನ ಮಿತ್ರಪಕ್ಷವನ್ನು ಪ್ರಶ್ನಿಸಿದೆ. 
 
ಸೆಪ್ಟೆಂಬರ್ 29 ರಂದು ನಡೆಸಲಾದ ಸೀಮಿತ ದಾಳಿಯ ಬಳಿಕ ಪ್ರಧಾನಿ ಮೋದಿ ಮತ್ತಷ್ಟು ಹೆಚ್ಚು ವಿಶ್ವಾಸವನ್ನು ಪಡೆದುಕೊಂಡಿದ್ದಾರೆ.  ಆದಷ್ಟು ಬೇಗ ರಾಮ ಮಂದಿರ ನಿರ್ಮಾಣವನ್ನು ಆರಂಭಿಸಿ ಎಂದು ಒತ್ತಾಯಿಸಿರುವ ಠಾಕ್ರೆ ನೇತೃತ್ವದ ಪಕ್ಷ, ಉತ್ತರ ಪ್ರದೇಶ ಚುನಾವಣೆ ಬಿಜೆಪಿ ಪಾಲಿಗೆ ಜೀವನ್ಮರಣದ ಪ್ರಶ್ನೆ ಎನಿಸಿದೆ. ಕೇವಲ ಘೋಷಣೆ ಕೂಗಬೇಡಿ, ಅಡಿಗಲ್ಲನ್ನಿಟ್ಟು ಕೆಲಸ ಆರಂಭಿಸಿ ಎಂದು ಹೇಳಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಕಾರಣವಿಲ್ಲದೆ ದೀರ್ಘಾವಧಿಗೆ ಸೆಕ್ಸ್ ನಿರಾಕರಿಸಿದರೆ ವಿಚ್ಛೇದನ ಪಡೆಯಬಹುದು