ಕಾಂಗ್ರೆಸ್ ಮುಕ್ತ ಭಾರತದ ಗುರಿ ತುಂಬಾ ದೂರವಿರುವುದರಿಂದ ಹೆಚ್ಚಿನ ಸಂಭ್ರಮ ಬೇಡ ಎಂದು ಶಿವಸೇನೆ ಮುಖ್ಯಸ್ಥ ಉದ್ಭವ್ ಠಾಕ್ರೆ, ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆ ಫಲಿತಾಂಶಗಳ ಬಗ್ಗೆ ಸಂಭ್ರಮದಿಂದ ಬೀಗುತ್ತಿರುವ ಬಿಜೆಪಿಗೆ ಸಲಹೆ ನೀಡಿದ್ದಾರೆ.
ಬಿಜೆಪಿ ಕೇವಲ ಆಸ್ಸಾಂ ರಾಜ್ಯದಲ್ಲಿ ಜಯಗಳಿಸಿದೆ, ಕೇರಳದಲ್ಲಿ ಎಡಪಕ್ಷ ಜಯಗಳಿಸಿದೆ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಜಯಭೇರಿ ಬಾರಿಸಿದೆ, ತ,ಮಿಳುನಾಡಿನಲ್ಲಿ ಎಐಎಡಿಎಂಕೆ ಜಯಗಳಿಸಿದೆ, ಪುದುಚೇರಿಯಲ್ಲಿ ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟ ಜಯಗಳಿಸಿದೆ ಎನ್ನುವುದನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ದೇಶದ ಜನತೆ ಮನಪೂರ್ವಕವಾಗಿ ಬಿಜೆಪಿಗೆ ಬೆಂಬಲ ನೀಡಿ ಅಧಿಕಾರಕ್ಕೆ ತಂದಿರುವುದು ಸತ್ಯ. ಆದರೆ, ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ನೀಡಿದೆ ಎನ್ನುವ ಅಹಂಕಾರ ಬೇಡ ಎಂದಿದ್ದಾರೆ.
ಒಂದು ವೇಳೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಸರಕಾರದ ದೂರದೃಷ್ಟಿ ಮತ್ತು ನೀತಿಗಳು ದೇಶದ ಜನತೆಗೆ ಪೂರಕವಾಗಿದ್ದಲ್ಲಿ ಇತರ ನಾಲ್ಕು ರಾಜ್ಯಗಳ ಜನತೆ ಬೆಂಬಲಿಸುತ್ತಿದ್ದರು. ಕೇವಲ ಆಸ್ಸಾಂ ಜನತೆ ಮಾತ್ರ ಬಿಜೆಪಿಗೆ ಮತ ನೀಡಿದ್ದಾರೆ ಎನ್ನುವ ಬಗ್ಗೆ ಗಮನಹರಿಸಿ ಎಂದು ಶಿವಸೇನೆ ಮುಖ್ಯಸ್ಥ ಉದ್ಭವ್ ಠಾಕ್ರೆ ಲೇವಡಿ ಮಾಡಿದ್ದಾರೆ.
ವೆಬ್‌ದುನಿಯಾ
ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.