Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಒಂದು ದಿನದ ಜಾಮೀನು ಪಡೆದು ತಂದೆ ತಿಥಿಯಲ್ಲಿ ಪಾಲ್ಗೊಂಡ ಇಂದ್ರಾಣಿ

ಒಂದು ದಿನದ ಜಾಮೀನು ಪಡೆದು ತಂದೆ ತಿಥಿಯಲ್ಲಿ ಪಾಲ್ಗೊಂಡ ಇಂದ್ರಾಣಿ
ನವದೆಹಲಿ , ಮಂಗಳವಾರ, 27 ಡಿಸೆಂಬರ್ 2016 (15:27 IST)
ಸ್ವಂತ ಮಗಳು ಶೀನಾ ಬೋರಾ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಇಂದ್ರಾಣಿ ಮುಖರ್ಜಿ ಒಂದು ದಿನದ ಶರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಗೊಂಡು ಇಂದು ತಂದೆಯ ತಿಥಿಯಲ್ಲಿ ಪಾಲ್ಗೊಂಡರು. 

ಡಿಸೆಂಬರ್ 15 ರಂದು ಇಂದ್ರಾಣಿ ತಂದೆ ಉಪೇಂದ್ರ ಕುಮಾರ್ ಬೋರಾ ಸಾವನ್ನಪ್ಪಿದ್ದು, ಅವರ ಅಂತಿಮ ವಿಧಿವಿಧಾನದಲ್ಲಿ ಪಾಲ್ಗೊಳ್ಳಲು ಗೌಹಾತಿಗೆ ಹೋಗಲು ಅನುಮತಿ ನೀಡುವಂತೆ ಇಂದ್ರಾಣಿ ಡಿಸೆಂಬರ್ 19ರಂದು ಜಾಮೀನಿಗಾಗಿ ಮನವಿ ಸಲ್ಲಿಸಿದ್ದರು.
 
ಅವರ ಮನವಿಯನ್ನು ಸ್ವೀಕರಿಸಿದ ನ್ಯಾಯಾಧೀಶರಾದ ಹೆಚ್.ಎಸ್.ಮಹಾಜನ್ ಒಂದು ದಿನದ ಜಾಮೀನು ನೀಡಿದ್ದು, ಪೊಲೀಸ್ ಬೆಂಗಾವಲಿನಲ್ಲಿ ಅವರು ಮುಳುಂದ್‌ನ ಬ್ರಾಹ್ಮಣ ಸೇವಾ ಸಮಿತಿಯಲ್ಲಿ ತಂದೆಯ ತಿಥಿ ನೆರವೇರಿಸಿದ್ದಾರೆ
 
ತಮ್ಮ ಮಗಳು ಶೀನಾ ಬೋರಾ ಹತ್ಯೆ ಆರೋಪದ ಮೇಲೆ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಬಂಧನಕ್ಕೊಳಪಟ್ಟಿದ್ದ ಇಂದ್ರಾಣಿ, ಕಳೆದೊಂದು ವರ್ಷದಿಂದ ಬೈಕುಲ್ಲಾ ಜೈಲಿನಲ್ಲಿದ್ದಾರೆ. ಆಕೆಯ ಮೂರನೆಯ ಪತಿ ಪೀಟರ್ ಮುಖರ್ಜಿ ಕೂಡ ಇದೇ ಜೈಲಿನಲ್ಲಿದ್ದಾರೆ. 
 
ತನ್ನ ಎರಡನೆಯ ಪತಿ ಸಂಜೀವ್ ಖನ್ನಾ ಸಹಾಯದಿಂದ ಇಂದ್ರಾಣಿ ಮಗಳು ಶೀನಾ ಬೋರಾಳನ್ನು ಉಸಿರುಗಟ್ಟಿಸಿ ಸಾಯಿಸಿದ್ದಳು ಎಂಬ ಆರೋಪವಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕ ಜಮೀರ್‌ ರಾಜಕೀಯ ಸ್ಥಿತಿ ಅತಂತ್ರ: ಆರ್.ಅಶೋಕ್ ವ್ಯಂಗ್ಯ