ದಿವಂಗತ ಮಾಜಿ ಸಿಎಂ ಜೆ.ಜಯಲಲಿತಾ ಅಣ್ಣನ ಪುತ್ರ ದೀಪಕ್ಗೆ ಸಿಎಂ ಸ್ಥಾನ ನೀಡುವ ಕುರಿತಂತೆ ಎಐಎಢಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಈಗಾಗಲೇ ದೀಪಕ್ ಜಯಕುಮಾರ್ ಗೋಲ್ಡನ್ ಬೇ ರಿಸಾರ್ಟ್ಗೆ ಆಗಮಿಸಿದ್ದು, ಶಶಕಲಾ ಅವರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶಶಿಕಲಾ ಆಪ್ತರಾದ ಲೋಕೋಪಯೋಗಿ ಖಾತೆ ಸಚಿವ ಮತ್ತೊಬ್ಬ ಹಿರಿಯ ಸಚಿವರ ಹೆಸರು ಸಿಎಂ ಸ್ಥಾನಕ್ಕೆ ಕೇಳಿಬರುತ್ತಿದೆ ಎಂದು ಎಐಎಡಿಎಂಕೆ ಮುಖಂಡರು ತಿಳಿಸಿದ್ದಾರೆ.
ಜಯಲಲಿತಾ ಅಂತ್ಯಸಂಸ್ಕಾರ ಸಂದರ್ಭದಲ್ಲಿ ದೀಪಕ್ ಉಪಸ್ಥಿತರಿದ್ದು ತಮಿಳುನಾಡಿನ ಜನತೆಯ ಗಮನ ಸೆಳೆದಿದ್ದರು.
ಮತ್ತೊಂದೆಡೆ ಕಾಂಚೀಪುರಂ ಜಿಲ್ಲೆಯ ಕೋವತ್ತೂರ್ನಲ್ಲಿರುವ ಗೋಲ್ಡನ್ ಬೇ ಖಾಸಗಿ ರಿಸಾರ್ಟ್ನಲ್ಲಿ ವಾಸ್ತವ್ಯ ಹೂಡಿರುವ ಬೆಂಬಲಿಗ ಶಾಸಕರು, ಶಶಿಕಲಾ ಮುಖ್ಯಮಂತ್ರಿ ಹುದ್ದೆ ಅಲಂಕರಿಸುವ ಸಾಧ್ಯತೆಗಳಿರದ ಹಿನ್ನೆಲೆಯಲ್ಲಿ ಅವರ ಕುಟುಂಬದ ಸದಸ್ಯರಲ್ಲೊಬ್ಬರು ಸಿಎಂ ಆಗಲಿ ಎಂದು ಪಟ್ಟು ಹಿಡಿದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.