ನವದೆಹಲಿ: ಇದುವರೆಗೆ ಕಾಂಗ್ರೆಸ್ ಪಕ್ಷದ ಪ್ರಮುಖ ಮಿತ್ರ ಪಕ್ಷವೆಂದೇ ಪರಿಗಣಿಸಲಾಗಿದ್ದ ಎನ್ ಸಿಪಿ ಪಕ್ಷದ ಮುಖ್ಯಸ್ಥ ರಾಷ್ಟ್ರಪತಿ ಚುನಾವಣೆ ದಿನ ಕಾಂಗ್ರೆಸ್ ಮೈತ್ರಿ ಕೂಟಕ್ಕೆ ಕೈ ಕೊಟ್ಟು ಬಿಜೆಪಿ ಮಿತ್ರ ಕೂಟದ ಕೈ ಹಿಡಿದಿದ್ದಾರೆ.
ಇಂದು ರಾಷ್ಟ್ರಪತಿ ಚುನಾವಣೆ ನಡೆಯುತ್ತಿದ್ದು, ತಮ್ಮ ಮಿತ್ರ ಪಕ್ಷವಾದ ಯುಪಿಎ ಅಭ್ಯರ್ಥಿ ಮೀರಾ ಕುಮಾರ್ ರನ್ನು ಬೆಂಬಲಿಸುವ ಬದಲು ಎನ್ ಡಿಎ ಅಭ್ಯರ್ಥಿ ರಮಾನಾಥ್ ಕೋವಿಂದ್ ಗೆ ಪವಾರ್ ಜೈ ಎಂದಿದ್ದಾರೆ.
ಯುಪಿಎ ಸರ್ಕಾರದಲ್ಲಿ ಸಚಿವರೂ ಆಗಿದ್ದ ಪವಾರ್ ಹೀಗೆ ಕೊನೆ ಕ್ಷಣದಲ್ಲಿ ತಮ್ಮ ಮೈತ್ರಿಕೂಟಕ್ಕೆ ಕೈ ಕೊಟ್ಟಿರುವುದು ಕಾಂಗ್ರೆಸ್ ಮತ್ತು ಇತರ ಯುಪಿಎ ಪಕ್ಷಗಳಿಗೆ ಭಾರೀ ಮುಖಭಂಗವಾದಂತಾಗಿದೆ. ಪ. ಬಂಗಾಳದಲ್ಲೂ ನಾಯಕಿ ಮಮತಾ ಬ್ಯಾನರ್ಜಿಗೆ ಸೆಡ್ಡು ಹೊಡೆದಿರುವ ಕೆಲವು ತೃಣಮೂಲ ಕಾಂಗ್ರೆಸ್ ಶಾಸಕರು ಎನ್ ಡಿಎ ಅಭ್ಯರ್ಥಿಗೆ ಮತ ಹಾಕಲು ನಿರ್ಧರಿಸಿದ್ದಾರೆ. ಇದು ಯುಪಿಎಗೆ ನಿಜಕ್ಕೂ ಶಾಕ್ ಆಗಿದೆ. ಇದಕ್ಕೂ ಮೊದಲು ಯುಪಿಎ ಮೈತ್ರಿಕೂಟಕ್ಕೆ ಬಿಹಾರ ಸಿಎಂ ನಿತೀಶ್ ಕುಮಾರ್ ಕೈ ಕೊಟ್ಟಿದ್ದರು.