ಮಲೆಯಾಳಂ ನಟಿಯ ಅಪಹರಣ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್ಐಟಿ) ನಟ ದಿಲೀಪ್ ಅವರ ವಿರುದ್ಧ ಸಲ್ಲಿಸಿರುವ ಚಾರ್ಜ್ ಶೀಟ್‍ನ್ನು ಕೇರಳ ವಿಚಾರಣಾ ಕೋರ್ಟ್ ಒಪ್ಪಿಕೊಂಡಿದೆ.
ದಿಲೀಪ್ ಹಾಗೂ ಅವರ ಮಾಜಿ ಪತ್ನಿ ಮಂಜು ವಾರಿಯರ್ ಸೇರಿದಂತೆ 12 ಮಂದಿ ವಿರುದ್ಧ ನವೆಂಬರ್ 22ರಂದು ಸಲ್ಲಿಕೆಯಾಗಿದ್ದ 650 ಪುಟಗಳ ಚಾರ್ಜ್ ಶೀಟ್‍ನ್ನು ಅಂಗಮಲ್ಯ ಕೋರ್ಟ್ ಒಪ್ಪಿಕೊಂಡಿದ್ದು, 385 ಸಾಕ್ಷಿಗಳು ಮತ್ತು 12 ಗೌಪ್ಯ ಹೇಳಿಕೆಗಳನ್ನು ಉಲ್ಲೇಖಿಸಿದ್ದಾರೆ. ಇದರಲ್ಲಿ ಚಿತ್ರೋದ್ಯಮದ 50 ಸಾಕ್ಷಿಗಳಿವೆ.
ಎರ್ನಾಕುಲಂಗೆ ಪ್ರಯಾಣಿಸುತ್ತಿದ್ದ ನಟಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪ್ರಮುಖ ಆರೋಪಿ ಪಲ್ಸರ್ ಸುನಿಯನ್ನು ಫೆ.23ರಂದು ಪೊಲೀಸರು ಬಂಧಿಸಿದ್ದರು. ಇದೇ ಪ್ರಕರಣ ಸಂಬಂಧ ನಟ ದಿಲೀಪ್ ಅವರನ್ನು ಸಹ ಕಳೆದ ಜುಲೈ10 ರಂದು ಬಂಧಿಸಲಾಗಿತ್ತು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.