Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮುಗ್ಧ ಯುವಕರ ಜೀವ ಬಲಿಗೊಟ್ಟು ಕಾಶ್ಮೀರ ವಿಷಯ ಗಮನಸೆಳೆಯುವ ಪ್ರಯತ್ನ: ಬಿಜೆಪಿ ಆರೋಪ

ಮುಗ್ಧ ಯುವಕರ ಜೀವ ಬಲಿಗೊಟ್ಟು ಕಾಶ್ಮೀರ ವಿಷಯ ಗಮನಸೆಳೆಯುವ ಪ್ರಯತ್ನ: ಬಿಜೆಪಿ ಆರೋಪ
ಜಮ್ಮು: , ಬುಧವಾರ, 7 ಸೆಪ್ಟಂಬರ್ 2016 (19:15 IST)
ಪ್ರತ್ಯೇಕತಾವಾದಿಗಳು ಭಾರತದ ವಿರುದ್ಧ ಬದಲಿ ಯುದ್ಧ ನಡೆಸುತ್ತಿದ್ದಾರೆಂದು ಬಿಜೆಪಿ ಮಂಗಳವಾರ ಗಂಭೀರವಾದ ಆರೋಪ ಮಾಡಿದೆ. ಆಮದಾದ ಭಯೋತ್ಪಾದಕರ ನೆರವಿನಿಂದ ಮತ್ತು ಪಾಕಿಸ್ತಾನದ ಆರ್ಥಿಕ ನೆರವಿನಿಂದ ಅಜಾದಿ ಹೆಸರಿನಲ್ಲಿ ಪ್ರತ್ಯೇಕತಾವಾದಿಗಳು ಬದಲಿ ಯುದ್ಧ ನಡೆಸಿದ್ದಾರೆಂದು ಬಿಜೆಪಿ ಆರೋಪಿಸಿತು. ಕಣಿವೆಯಲ್ಲಿ ಪ್ರಸಕ್ತ ಅಶಾಂತಿಗೆ ನೆರೆಯ ರಾಷ್ಟ್ರದ ಪ್ರವರ್ತನೆಯೇ ಕಾರಣ ಎಂದು ಬಿಜೆಪಿ ರಾಜ್ಯ ವಕ್ತಾರ ಬಲ್ಬೀರ್ ರಾಮ್ ರತನ್ ತಿಳಿಸಿದರು.
 
ಪ್ರತ್ಯೇಕತಾವಾದಿಗಳು ಯುವಕರನ್ನು ದಾರಿತಪ್ಪಿಸುತ್ತಿದ್ದು, ಭದ್ರತಾ ಪಡೆಗಳ ವಿರುದ್ಧ ಸಂಘರ್ಷದಲ್ಲಿ ಮಾನವ ಕವಚಗಳಂತೆ ಯುವಕರನ್ನು ಬಳಸಿಕೊಳ್ಳುತ್ತಿದ್ದಾರೆ. ಈ ರೀತಿ ಪೂರ್ವನಿಯೋಜಿತ ರೀತಿಯಲ್ಲಿ ಯುವಕರ ಜೀವಗಳನ್ನು ಬಲಿಗೊಟ್ಟು ಜಗತ್ತಿನಲ್ಲಿ ಕಾಶ್ಮೀರ ವಿಷಯವನ್ನು ಗಮನಸೆಳೆಯುವ ಪ್ರಯತ್ನ ನಡೆದಿದೆ ಎಂದು ಅವರು ಆರೋಪಿಸಿದರು.
 
ಕಾಶ್ಮೀರ ಸಮಸ್ಯೆಯು ಕಾಶ್ಮೀರದಲ್ಲಿನ ಸಮಸ್ಯೆಯಾಗಿದೆ. ಬಹುತೇಕ ಮಂದಿ ಕಾಶ್ಮೀರದಲ್ಲಿ ಶಾಂತಿ ಮತ್ತು ನೆಮ್ಮದಿ ಬಯಸಿದ್ದಾರೆ. ಆದರೆ ಕಣಿವೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾಡಿಗೆ ಬಂಟರ ನೆರವಿನೊಂದಿಗೆ ಪಾಕಿಸ್ತಾನ ಸೃಷ್ಟಿಸಿದ ಪರಿಸ್ಥಿತಿಯನ್ನು ಸಹಿಸಿಕೊಳ್ಳಬೇಕಿದೆ ಎಂದು ರತನ್ ಟೀಕಿಸಿದರು.
 
ಕಾಶ್ಮೀರದಲ್ಲಿ ಸಮಸ್ಯೆಯು ಕೇಂದ್ರದ ಸತತ ಸರ್ಕಾರಗಳ ತಪ್ಪು ನೀತಿಗಳ ಫಲವಾಗಿದೆ. ಪ್ರತ್ಯೇಕತಾವಾದಿಗಳನ್ನು ಮತ್ತು ಪಟ್ಟಭದ್ರ ಹಿತಾಸಕ್ತಿಗಳಿಂದ ಕೂಡಿದ ರಾಜಕಾರಣಿಗಳನ್ನು ಸದಾ ಓಲೈಸುತ್ತಾ ಜನಸಮೂಹದ ಹಿತಾಸಕ್ತಿಗಳನ್ನು ಕಡೆಗಣಿಸಿದ ಫಲವಾಗಿದೆ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಕಾವೇರಿ ನೀರಿಗಾಗಿ ಜೀವ ಕೊಡಲು ಸಿದ್ದ: ಶಿವಣ್ಣ ಘೋಷಣೆ