ಲಕ್ನೋ: ಪ್ರಧಾನಿ ಮೋದಿ ಪ್ರತೀ ತಿಂಗಳು ರೇಡಿಯೋದಲ್ಲಿ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ತಮ್ಮ ಮನದಾಳದ ಮಾತುಗಳನ್ನು ಹೇಳುತ್ತಾರೆ. ಅವರ ಮನ್ ಕೀ ಬಾತ್ ನ ಪ್ರಭಾವ ಎಷ್ಟು ಎಂಬುದಕ್ಕೆ ಇಲ್ಲಿದೆ ಉದಾಹರಣೆ.
ಸದಾ ಯೋಗ ಮಾಡುವುದಿಲ್ಲವೆನ್ನುವ ಮುಸ್ಲಿಮರು ಪ್ರಧಾನಿ ಮೋದಿ ಮಾತು ಕೇಳಿ ಜೂನ್ 21 ರಂದು ನಡೆಯಲಿರುವ ಯೋಗ ದಿನವನ್ನು ಆಚರಿಸಲು ನಿರ್ಧರಿಸಿದ್ದಾರೆ. ಇದೆಲ್ಲಾ ಮೋದಿ ರೇಡಿಯೋದಲ್ಲಿ ಯೋಗ ದಿನ ಆಚರಿಸುವಂತೆ ಕರೆ ಕೊಟ್ಟಿದ್ದರ ಪರಿಣಾಮ.
ಲಕ್ನೋದ ಈ ಮುಸ್ಲಿಂ ಪಂಗಡದೊಂದಿಗೆ ಸ್ವತಃ ಪ್ರಧಾನಿ ಮೋದಿ ವಿಶ್ವ ಯೋಗ ದಿನದಂದು ಯೋಗಾಭ್ಯಾಸ ಮಾಡಲಿದ್ದಾರೆ. ಹಾಗಾಗಿ ಧರ್ಮ, ಪಂಗಡ ಎಲ್ಲಾ ಬದಿಗಿಟ್ಟು ಇಲ್ಲಿನ ಜನತೆ ಪ್ರಧಾನಿ ಜತೆ ಯೋಗ ಮಾಡುವ ಉತ್ಸಾಹದಲ್ಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ