Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತಮಿಳುನಾಡು: ರೈತರ ಸಾಲಮನ್ನಾ ಆದೇಶಕ್ಕೆ ಸುಪ್ರೀಂ ತಡೆ

ತಮಿಳುನಾಡು: ರೈತರ ಸಾಲಮನ್ನಾ ಆದೇಶಕ್ಕೆ ಸುಪ್ರೀಂ ತಡೆ
ನವದೆಹಲಿ , ಸೋಮವಾರ, 3 ಜುಲೈ 2017 (14:53 IST)
ನವದೆಹಲಿ: ತಮಿಳುನಾಡಿನ ರೈತರ ಸಾಲಮನ್ನಾ ಮಾಡುವಂತೆ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.  ಈ ಮೂಲಕ ತಮಿಳುನಾಡು ರೈತರ ಬಾರಿ ಪ್ರತಿಭಟನೆಗೆ ಹಿನ್ನಡೆಯುಂಟಾಗಿದೆ.
 
ಕೇವಲ 5 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರ ಸಾಲ ಮಾತ್ರವಲ್ಲದೇ 5 ಎಕರೆಗಿಂತ ಹೆಚ್ಚು ಭೂಮಿ ಹೊಂದಿರುವ ರೈತರ ಸಾಲವನ್ನು  ಕೂಡ ಮನ್ನಾ ಮಾಡಬೇಕು ಎಂದು ಈ ಹಿಂದೆ ಮದ್ರಾಸ್ ಹೈಕೋರ್ಟ್ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ನ್ಯಾಯಮೂರ್ತಿಗಳಾದ ಮದನ್ ಬಿ ಲೋಕುರ್ ನೋಟಿಸ್ ಜಾರಿ ಮಾಡಿದ್ದು, ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದ್ದಾರೆ.
 
ತಮಿಳುನಾಡು ರೈತರು ಈ ಹಿಂದೆ ಸಾಲಮನ್ನಾ ಮಾಡಬೇಕು ಎಂದು ಆಗ್ರಹಿಸಿ ದೆಹಲಿಯ ಜಂತರ್ ಮಂತರ್ ಬಳಿ ಅರೆಬೆತ್ತಲೆ ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಎರಡನೇ ಪತ್ನಿ ವಿಚಾರ ಮುಚ್ಚಿಟ್ಟು ಸಂಕಷ್ಟಕ್ಕೆ ಸಿಲುಕಿದರೇ ಈ ಶಾಸಕ?