Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸುಪ್ರೀಂ ಕೋರ್ಟ್ ತೀರ್ಪು ತೃಪ್ತಿ ತಂದಿದೆ: ಬಿವಿ ಆಚಾರ್ಯ

ಸುಪ್ರೀಂ ಕೋರ್ಟ್ ತೀರ್ಪು ತೃಪ್ತಿ ತಂದಿದೆ: ಬಿವಿ ಆಚಾರ್ಯ
Bangalore , ಮಂಗಳವಾರ, 14 ಫೆಬ್ರವರಿ 2017 (11:10 IST)
ಬೆಂಗಳೂರು: ಜಯಲಲಿತಾ ಅಕ್ರಮ ಆಸ್ಥಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯದಲ್ಲಿ ನಡೆದ ವಿಚಾರಣೆಗಳಲ್ಲಿ ವಕೀಲರಾಗಿ ಕಾರ್ಯನಿರ್ವಹಿಸಿದ ಕರ್ನಾಟಕದ ಬಿವಿ ಆಚಾರ್ಯ ಈ ತೀರ್ಪು ತೃಪ್ತಿ ತಂದಿದೆ ಎಂದಿದ್ದಾರೆ.

 
ಕರ್ನಾಟಕ ನ್ಯಾಯಾಲಯ ಇಷ್ಟು ದಿನಗಳ ಕಾಲ ಶ್ರಮವಹಿಸಿ ಮಾಡಿದ ನ್ಯಾಯ ತೀರ್ಪಿಗೆ ಸುಪ್ರೀಂ ಕೋರ್ಟ್ ತಕ್ಕ ಬೆಲೆ ನೀಡಿದೆ. ಈ ತೀರ್ಪಿನಿಂದ ಸಂತೋಷವಾಗಿದೆ ಎನ್ನುವುದಕ್ಕಿಂತ ನ್ಯಾಯಕ್ಕೆ ಜಯ ಸಿಕ್ಕಿರುವುದು ತೃಪ್ತಿ ತಂದಿದೆ ಎಂದು ಬಿವಿ ಆಚಾರ್ಯ ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದಾಗಿ ಶಶಿಕಲಾ ನಟರಾಜನ್ ಅಪರಾಧಿಯಾಗಿರುವುದರಿಂದ 10 ವರ್ಷ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಇದೇ ವೇಳೆ ಇಳವರಸಿ, ಜಯಾ ದತ್ತು ಪುತ್ರ ಸುಧಾಕರನ್ ಕೂಡಾ ಅಪರಾಧಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ಜಯಲಲಿತಾ ನಿಧನರಾದ ಹಿನ್ನಲೆಯಲ್ಲಿ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ          

Share this Story:

Follow Webdunia kannada

ಮುಂದಿನ ಸುದ್ದಿ

ನಿರೀಕ್ಷಿಸಿರದ ಸುಪ್ರೀಂ ಕೋರ್ಟ್ ತೀರ್ಪು: ಹಾರ ತುರಾಯಿ ತಂದಿದ್ದ ಶಶಿಕಲಾ ಬೆಂಬಲಿಗರಿಗೆ ನಿರಾಸೆ!