ಆದಾಯಕ್ಕೆ ಮೀರಿದ ಅಧಿಕ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಶಶಿಕಲಾ ನಟರಾಜನ್, ಸುಪ್ರೀಂಕೋರ್ಟ್ ಆದೇಶದಂತೆ ಬೆಂಗಳೂರು ಕೋರ್ಟ್`ಗೆ ಹಾಜರಾಗಿದ್ದಾರೆ. ಸಂಜೆ 5.45ರ ಸುಮಾರಿಗೆ ಪತಿ ನಟರಾಜನ್ ಮತ್ತು ಬೆಂಬಲಿಗರ ಜೊತೆ ಕೋರ್ಟ್`ಗೆ ಬಂದ ಶಶಿಕಲಾ, ನ್ಯಾಯಾಧೀಶರ ಮುಂದೆ ಹಾಜರಾದರು.
ಈ ಸಂದರ್ಭ ಶಶಿಕಲಾ ವೈದ್ಯಕೀಯ ವರದಿಗಳನ್ನ ಮುಂದಿಟ್ಟು ಮನೆ ಊಟಕ್ಕೆ ಬೇಡಿಕೆ ಇಟ್ಟಿದ್ದು, ನ್ಯಾಯಾಧೀಶರು ತಿರಸ್ಕರಿಸಿದ್ದಾರೆ.
ಕಾನೂನು ಪ್ರಕ್ರಿಯೆ ಮುಗಿಸಿದ ಬಳಿಕ ಶಶಿಕಲಾ ನಡೆದುಕೊಂಡೇ ಜೈಲಿಗೆ ತೆರಳಿದರು. ಶಶಿಕಲಾ ಜೊತೆ ಇಳವರಸಿ ಸಹ ಇದ್ದಾರೆ. ನಡೆದುಕೊಂಡೇ ಇಬ್ಬರೂ ಜೈಲಿಗೆ ತೆರಳಿದ್ದು, ಸಾಮಾನ್ಯ ಕೈದಿಯಂತೆ ನಡೆಸಿಕೊಳ್ಳಲಾಗುತ್ತೆ. ಯಾವುದೇ ವಿಶೇಷ ಸೌಲಭ್ಯ ದಗಿಸುವ ಸಾಧ್ಯತೆ ಇಲ್ಲ.