ಸಿಎಂಗಾದಿಗೇರಲು ತುದಿಗಾಲ ಮೇಲೆ ನಿಂತಿದ್ಧ ಶಶಿಕಲಾ ಕನಸು ಭಗ್ನವಾಗಿದೆ. ಶಶಿಕಲಾ ಅಪರಾಧಿ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ದೋಷಮುಕ್ತಗೊಳಿಸಿ ಹೈಕೋರ್ಟ್ ನೀಡಿದ್ದ ಆದೇಶವನ್ನ ಸುಪ್ರೀಂಕೋರ್ಟ್ ವಜಾಗೊಳಿಸಿದ್ದು, ಕೆಳನ್ಯಾಯಾಲಯದ ತೀರ್ಪನ್ನ ಎತ್ತಿ ಹಿಡಿದಿದೆ. ಶಶಿಕಲಾ ಸೇರಿ ಮೂವರೂ ದೋಷಿಗಳೆಂದು ಸುಪ್ರೀಂಕೋರ್ಟ್ ವಿಭಾಗೀಯ ಪೀಠ ಆದೇಶಿಸಿದೆ.
ಶಶಿಕಲಾಗೆ 4 ವರ್ಷ ಜೈಲು ಮತ್ತು 10 ಕೋಟಿ ರೂಪಾಯಿ ದಂಡ ವಿಧಿಸಿದೆ. ಮುಂದಿನ 10 ವರ್ಷಗಳ ಕಾಲ ಶಶಿಕಲಾ ಯಾವುದೇ ಚುನಾವಣೆಗೆ ಸ್ಪರ್ಧಿಸುವಂತಿಲ್ಲ.
ಇದೇವೇಳೆ, ಪ್ರಕರಣದ ರೋಪಿಗಳಾದ ಶಶಿಕಲಾ, ಇಳವರಸಿ ಮತ್ತು ಸುಧಾಕರನ್ ಅವರು ಕೂಡಲೇ ಬೆಂಗಳೂರಿನ ಪರಪ್ಪನ ಅಗ್ರಹಾರ ಕೋರ್ಟ್`ಗೆ ಶರಣಾಗುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ.