ಆದಾಯಕ್ಕೂ ಮೀರಿ ಆಸ್ತಿ ಗಳಿಸಿದ ಅಪರಾಧದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಶಶಿಕಲಾ ಇಂದು ಸಂಜೆ ವೇಳೆಗೆ ಪರಪ್ಪನ ಅಗ್ರಹಾರ ಜೈಲು ಸೇರಲಿದ್ದಾರೆ. ಚೆನ್ನೈನಿಂದ ಬೆಂಗಳೂರಿನತ್ತ ಹೊರಟಿರುವ ಶಶಿಕಲಾ ಈಗಾಗಲೇ ಕರ್ನಾಟಕ ಅಧಿಕಾರಿಗಳ ಮುಂದೆ ದೊಡ್ಡ ಪಟ್ಟಿಯನ್ನೇ ಇಟ್ಟಿದ್ದಾರೆ.
- ಜೈಲಿನಲ್ಲೇ 24 ಗಂಟೆ ಮಿನರಲ್ ವಾಟರ್ ಸೌಲಭ್ಯ
- ಪ್ರತಿ ನಿತ್ಯ ಮನೆ ಊಟವೇ ಬೇಕು
- ಬೇಡಿ ಹಾಕಿ ಜೈಲಿಗೆ ಕರೆದೊಯ್ಯಬಾರದು
- ಸುಸಜ್ಜಿತ ಕೊಠಡಿ ಬೇಕು
ಆದರೆ, ಶಶಿಕಲಾಗೆ ಈ ಎಲ್ಲ ಸೌಲಭ್ಯಗಳು ಸಿಗುವ ಸಾಧ್ಯತೆ ಕಡಿಮೆ. 2014ರಲ್ಲಿ ಜೈಲು ಸೇರಿದ್ದ ಸಂದರ್ಭ ಜಯಲಲಿತಾ ನೆರಳಿನಲ್ಲಿ ಶಶಿಕಲಾ ಸೌಲಭ್ಯ ಪಡೆದಿದ್ದರು. ಆದರೆ, ಈಗ ಅವರನ್ನ ವಿವಿಐಪಿ ಖೈದಿ ಎಂದು ಪರಿಗಣಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.