Webdunia - Bharat's app for daily news and videos

Install App

ರಾಜಕೀಯಕ್ಕೆ ಬರೋ ಮಾತೇ ಆಡಿಲ್ಲ, ಆಗಲೇ ರಜನಿ ವಿರುದ್ಧ ತೊಡೆ ತಟ್ಟಿದ ನಟ

Webdunia
ಸೋಮವಾರ, 16 ಜನವರಿ 2017 (12:37 IST)
ರಾಜಕೀಯಕ್ಕೆ ಬರುವುದಾಗಿ ರಜನೀಕಾಂತ್ ಇಲ್ಲಿಯವರೆಗೂ ಹೇಳಿಕೆ ನೀಡಿದಲ್ಲ. ಆದರೆ ರಜನಿ ರಾಜಕಾರಣಕ್ಕೆ ಬಂದರೆ ಮೊದಲು ವಿರೋಧಿಸುವವನು ನಾನು ಎಂದು ಹೇಳುವ ಮೂಲಕ ಹಿರಿಯ ನಟ, ಎಐಡಿಎಂಕೆ ಮೈತ್ರಿಕೂಟದ ಸದಸ್ಯ ಪಕ್ಷ ಎಐಎಸ್‌ಎಂಕೆ ಅಧ್ಯಕ್ಷ ಶರತ್ ಕುಮಾರ್ ಹೊಸ ಕುತೂಹಲಕ್ಕೆ ಕಾರಣರಾಗಿದ್ದಾರೆ.
ತಮಿಳು ಪತ್ರಿಕೆ ತುಘಲಕ್‌ನ 147ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ರಜನೀಕಾಂತ್ ರಾಜಕೀಯಕ್ಕೆ ಬರುವುದು ಬೇಡ, ಒಂದೊಮ್ಮೆ ಅವರು ರಾಜಕೀಯ ಪ್ರವೇಶಿಸಿದ್ದೇ ಆದರೆ ಮೊದಲೆಯದಾಗಿ ವಿರೋಧಿಸಿಸುವವನು ನಾನು ಎಂದಿದ್ದಾರೆ. ಅವರ ಈ ಹೇಳಿಕೆಗೆ ಕೋಪಗೊಂಡಿರುವ ರಜನಿ ಅಭಿಮಾನಿಗಳು ರಾಜ್ಯಾದ್ಯಂತ ವ್ಯಾಪಕ ಪ್ರತಿಭಟನೆಯನ್ನು ಕೈಗೊಂಡಿದ್ದಾರೆ. 
 
ಈ ಹೇಳಿಕೆಯನ್ನು ಸ್ವತಃ ಶರತ್ ಕುಮಾರ್ ಅವರೇ ಕೈಗೊಂಡಿದ್ದಾರೋ ಅಥವಾ ಆಡಳಿತಾರೂಢವಾಗಿರುವ ಅವರ ಮೈತ್ರಿ ಪಕ್ಷ ಎಐಡಿಎಂಕೆ ಹೇಳಿಸಿದೆಯೋ ಎಂಬುದು ನಿಗೂಢ.
 
ಜಯಾ ಸಾವಿನ ಬಳಿಕ ರಾಜ್ಯದಲ್ಲಿ ರಾಜಕೀಯ ಶೂನ್ಯತೆ ಸೃಷ್ಟಿಯಾಗಿದೆ ಎಂದು ರಜನಿ ಕೆಲ ದಿನಗಳ ಹಿಂದೆ ಹೇಳಿದ್ದರು. ಆದರೆ ತಾವು ರಾಜಕೀಯ ಪ್ರವೇಶಿಸುತ್ತೇನೆ ಎಂಬ ಮಾತನ್ನಾಡಿರಲಿಲ್ಲ. 
 
ಆದರೆ ಜಯಲಲಿತಾ ಸಾವಿನ ಬಳಿಕ ಸೃಷ್ಟಿಯಾಗಿರುವ ರಾಜಕೀಯ ಶೂನ್ಯತೆಯನ್ನು ಬಳಸಿಕೊಳ್ಳಲು ರಜನೀಕಾಂತ್ ಬರುತ್ತಾರೆನೋ ಎಂಬ ಆತಂಕ ಹಿರಿಯ ನಟ ಶರತ್ ಕುಮಾರ್ ಅಥವಾ ಎಐಡಿಎಂಕೆ ಪಕ್ಷವನ್ನು ಕಾಡಿರಬಹುದು. ಈ ಹಿನ್ನೆಲೆಯಲ್ಲಿ ಸಹ ಶರತ್ ಕುಮಾರ್ ಈ ರೀತಿಯ ಹೇಳಿಕೆಯನ್ನು ನೀಡಿಸಿರಬಹುದು.
 
ತಮಿಳುನಾಡು ರಾಜಕೀಯದ ಬಹುದೊಡ್ಡ ಮುಖ  ಜಯಾ ಸಾವನ್ನಪ್ಪಿದ್ದಾರೆ, ಇನ್ನೊಂದೆಡೆ ಕರುಣಾನಿಧಿ ಕೂಡ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇಂತಹ ಸಮಯದಲ್ಲಿ ರಜನಿಕಾಂತ್ ಅವರು ರಾಜಕೀಯ ಪ್ರವೇಶಿಸಿದರೆ ತಮ್ಮ ಪ್ರಾಬಲ್ಯ ಕುಸಿಯುತ್ತದೆ ಎಂಬ ಭಯ ಎಐಡಿಎಂಕೆಯನ್ನು ಕಾಡುತ್ತಿರಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments