Webdunia - Bharat's app for daily news and videos

Install App

ಕಮಲವನ್ನೆತ್ತಿದ ಸರಬ್ಜಿತ್ ಸಹೋದರಿ

Webdunia
ಸೋಮವಾರ, 26 ಡಿಸೆಂಬರ್ 2016 (09:22 IST)
ಪಾಕಿಸ್ತಾನದ ಜೈಲಿನಲ್ಲಿ ಸಾವನ್ನಪ್ಪಿದ್ದ ಸರಬ್ಜಿತ್ ಸಹೋದರಿ ದಲ್ಬಿರ್ ಕೌರ್ ಭಾನುವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. 
 
ಪಕ್ಷದ ಕಿಸಾನ್ ಮೋರ್ಚಾ ಆಯೋಜಿಸಿದ್ದ ಸಮ್ಮೇಳನವೊಂದರಲ್ಲಿ ಬಿಜೆಪಿ ಶಾಸಕ ಮತ್ತು ಪಂಜಾಬ್ ಸಚಿವ ಸುರ್ಜಿತ್ ಜ್ಯಾನಿ ಅವರ ಸಮ್ಮುಖದಲ್ಲಿ ಅವರು ಭಾರತೀಯ ಜನತಾಪಕ್ಷಕ್ಕೆ ಸೇರ್ಪಡೆಯಾದರು, ಎಂದು ಪಂಜಾಬ್ ಕಿಸಾನ್ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗುರ್ವಿಂದರ್ ಸಿಂಗ್ ಹೇಳಿದ್ದಾರೆ. 
 
ಮಾಧ್ಯಮವರ ಬಳಿಯೂ ದಲ್ಬಿರ್ ಈ ವಿಷಯವನ್ನು ದೃಢೀಕರಿಸಿದ್ದಾರೆ. 
 
2005ರಿಂದ ಬಿಜೆಪಿ ಜತೆ ನಿಕಟವಾಗಿದ್ದ ದಲ್ಬಿರ್, ತಮ್ಮ ಸಹೋದರನನ್ನು ಪಾಕ್ ಜೈಲಿನಿಂದ ಬಿಡುಗಡೆ ಮಾಡಿಸಲು ಹೋರಾಟ ಮಾಡುತ್ತಿದ್ದಾಗಲೇ ಅವರು ಬಿಜೆಪಿ ಸೇರುವ ಕುರಿತು ವರದಿಗಳು ಪ್ರಕಟವಾಗಿದ್ದವು. 
 
ಪಂಜಾಬ್- ಪಾಕ್ ಗಡಿಯ ಗ್ರಾಮದ ನಿವಾಸಿ ಸರಬ್ಜಿತ್ ರೈತನಾಗಿದ್ದು, ಆಕಸ್ಮಿಕವಾಗಿ ಪಾಕ್ ಗಡಿ ದಾಟಿದ್ದ ಎನ್ನಲಾಗುತ್ತಿದೆ. ಬೇಹುಗಾರಿಕೆ ಮತ್ತು ಭಯೋತ್ಪಾದನೆ ಆರೋಪದ ಮೇಲೆ ಆತನನ್ನು ಬಂಧಿಸಿದ್ದ ಪಾಕ್ ಮರಣದಂಡನೆ ವಿಧಿಸಿತ್ತು. ತಮ್ಮ ಸಹೋದರನ ಬಿಡುಗಡೆಗಾಗಿ ದಲ್ಬಿರ್ ಉಗ್ರ ಹೋರಾಟ ನಡೆಸಿದ್ದರು. 2013ರ ಏಪ್ರಿಲ್ ತಿಂಗಳಲ್ಲಿ ಸರಬ್ಜಿತ್ ಬಿಡುಗಡೆಗೊಳ್ಳುತ್ತಾನೆ ಎನ್ನಲಾಗುತ್ತಿತ್ತು. ಆದರೆ ಸಹ ಕೈದಿಗಳ ದಾಳಿಗೆ ತುತ್ತಾಗಿ ಆತ ಮರಣವನ್ನಪ್ಪಿದ್ದ. 
 
ದೇಶಾದ್ಯಂತ ಸಂಚಲನ ಮೂಡಿಸಿದ್ದ ಸರಬ್ಜಿತ್ ಕುರಿತು ಈ ವರ್ಷದ ಆರಂಭದಲ್ಲಿ ಹಿಂದಿ ಸಿನಿಮಾ ಕೂಡ ತೆರೆ ಕಂಡಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments