ಸಮಾಜವಾದಿ ಪಕ್ಷಕ್ಕೆ 'ನಾಟಕ ಕಂಪನಿ' ಎಂಬ ಹಣೆಪಟ್ಟಿ ಕಟ್ಟಿರುವ ಬಹುಜನ ಸಮಾಜವಾದಿ ಪಕ್ಷ, ಆಡಳಿತಾರೂಢ ಪಕ್ಷ ಜನರನ್ನು ಮೂರ್ಖರನ್ನಾಗಿಸುತ್ತಿದೆ ಎಂದು ಹೇಳಿದೆ.
ಸಮಾಜವಾದಿ ಪಕ್ಷ ನಾಯಕ ಕಂಪನಿಯಾಗಿಬಿಟ್ಟಿದೆ. ಆಡಳಿತ, ಅಭಿವೃದ್ಧಿಯ ಬಗ್ಗೆ ಅವರಿಗೆ ಚಿಂತೆಯೇ ಇಲ್ಲ, ಕೇವಲ ಜನರನ್ನು ಮೂರ್ಖರನ್ನಾಗಿಸುವುದೇ ಅವರ ಕೆಲಸವಾಗಿ ಬಿಟ್ಟಿದೆ. ಚುನಾವಣಾ ಆಯೋಗದ ನಿರ್ಧಾರ ಏನೇ ಆಗಿರಲಿ, ಜನರು ಮಾತ್ರ ಈಗಾಗಲೇ ಸಮಾಜವಾದಿ ಪಕ್ಷವನ್ನು ನಿರಾಕರಿಸಿದ್ದಾರೆ ಎಂದು ಬಿಎಸ್‌ಪಿ ನಾಯಕ ಸುಧೀಂದ್ರ ಭಡೋರಿಯಾ ಹೇಳಿದ್ದಾರೆ.
ಪಕ್ಷದ ಸ್ಥಾಪಕ ಮತ್ತು ಅವರ ಪುತ್ರ, ರಾಜ್ಯದ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಕೇವ ತಮ್ಮ ಬಗ್ಗೆ, ಅಧಿಕಾರ, ರಾಜಕೀಯ ಲಾಭಗಳ ಬಗ್ಗೆ ಮಾತ್ರ ಆಲೋಚನೆ ಮಾಡುತ್ತಾರೆ. ರಾಜ್ಯದ ಅಭಿವೃದ್ಧಿ ಚಿಂತೆ ಅವರಿಗಿಲ್ಲ ಎಂದು ಭಡೋರಿಯಾ ಆರೋಪಿಸಿದ್ದಾರೆ.
ಚುನಾವಣೆ ಸಮೀಪಿಸುತ್ತಿದ್ದರೂ ಸಮಾಜವಾದಿ ಪಕ್ಷದೊಳಗಿನ ಆಂತರಿಕ ಕಲಹ ಕೊನೆಗೊಳ್ಳದ ಹಿನ್ನೆಲೆಯಲ್ಲಿ ಅವರು ಈ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ