Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗಾಂಧಿ ಜಯಂತಿಯಂದು ಗೋಡ್ಸೆಗೆ ನಮಿಸುತ್ತಾರಂತೆ ಇವರು

ಗಾಂಧಿ ಜಯಂತಿಯಂದು ಗೋಡ್ಸೆಗೆ ನಮಿಸುತ್ತಾರಂತೆ ಇವರು
ಜಬಲ್ಪುರ , ಸೋಮವಾರ, 3 ಅಕ್ಟೋಬರ್ 2016 (12:33 IST)
ಮಹಾತ್ಮಾ ಗಾಂಧಿ ಹತ್ಯೆಯನ್ನು ಸಮರ್ಥಿಸಿಕೊಂಡಿರುವ ವಿಹೆಚ್‌ಪಿ ನಾಯಕಿ ಸಾಧ್ವಿ ಪ್ರಾಚಿ, ಅಂದು ಗೋಡ್ಸೆ ಅವರಿಗೆ ಗುಂಡಿಕ್ಕದಿದ್ದರೆ ಇಂದು ಹಿಂದೂಸ್ತಾನ ಮಕ್ಕಾ- ಮದೀನಾದಲ್ಲಿ ನಮಾಜ್ ಓದುತ್ತಿರುತ್ತಿತ್ತು ಎಂದಿದ್ದಾರೆ.
ಭಾನುವಾರ ಗಾಂಧಿ ಜಯಂತಿಯಂದು ಜಬಲ್ಪುರ ಪ್ರವಾಸದಲ್ಲಿದ್ದ ಸಾಧ್ವಿ ಮಾಧ್ಯಮದವರೊಂದಿಗೆ ಮಾತನ್ನಾಡುತ್ತ, ಮಹಾತ್ಮಾ ಗಾಂಧಿ ನನ್ನ ಆದರ್ಶವಾಗಲು ಸಾಧ್ಯವೇ ಇಲ್ಲ. ಗಾಂಧಿ ಜಯಂತಿಯಂದು ನಾನು ಗೋಡ್ಸೆಗೆ ನಮಿಸುತ್ತೇನೆ ಎಂದರು. 
 
ಪಾಕಿಸ್ತಾನ ಸಮಸ್ಯೆಯ ಜನಕ ಗಾಂಧೀಜಿ. ಜವಾಹರಲಾಲ್ ನೆಹರು ಅವರನ್ನು ಪ್ರಧಾನಿಯಾಗಿಸಿ ಅದನ್ನು ಹುಟ್ಟುಹಾಕಿದವರವರು. ಅವರ ಈ ತಪ್ಪಿನಿಂದ ಸಾವಿರಾರು ಸೈನಿಕರು ಹುತಾತ್ಮರಾಗುತ್ತಿದ್ದಾರೆ. ನನ್ನ ಆದರ್ಶ ಗಾಂಧಿ ಅಲ್ಲ ಚಂದ್ರಶೇಖರ್ ಆಜಾದ್, ಭಗತ್ ಸಿಂಗ್ ಎಂದಿದ್ದಾರೆ ಸಾಧ್ವಿ.
 
ಲಾಲ್ ಬಹಾದ್ದೂರ್ ಶಾಸ್ತ್ರಿ ಬಳಿಕ ಈ ದೇಶ ಕಂಡ ಅಸಾಮಾನ್ಯ ಪ್ರಧಾನಿ ಮೋದಿ ಎಂದ ಅವರು, ಮೋದಿ ದೇಶದ ಸೈನಿಕರ ಬಲಿದಾನಕ್ಕೆ ಪ್ರತೀಕಾರವನ್ನು ತೆಗೆದುಕೊಂಡರು ಎಂದು ಕೊಂಡಾಡಿದ್ದಾರೆ. 
 
ಪಾಕಿಸ್ತಾನದ ಕಲಾವಿದರು ಉಗ್ರರಲ್ಲ ಎಂಬ ಸಲ್ಮಾನ್ ಹೇಳಿಕೆಗೆ ಕಿಡಿಕಾರಿರುವ ವಿಹೆಚ್‌ಪಿ ನಾಯಕಿ ಸಾಧ್ವಿ ಪ್ರಾಚಿ, ಪಾಕ್ ಕಲಾವಿದರು ತಮ್ಮ ಕಲೆಯನ್ನು ತಮ್ಮ ದೇಶದಲ್ಲಿಯೇ ತೋರಿಸಿಕೊಳ್ಳಲಿ. ಈ ಕಲಾವಿದರ ಬಗ್ಗೆ ಸಲ್ಮಾನ್, ಶಾರುಖ್, ಅಮಿರ್ ಖಾನ್ ಸಹಿತ ಇತರ ಯಾರಿಗಾದರೂ ಸಹಾನುಭೂತಿ ಇದ್ದರೆ ಅವರು ಕೂಡ ಪಾಕಿಸ್ತಾನಕ್ಕೆ ಹೋಗಲಿ. ನಮ್ಮ ದೇಶದ ಅನ್ನ ತಿಂದು ಪಾಕಿಸ್ತಾನದ ಬಗ್ಗೆ ಅನುಕಂಪ ಸಲ್ಲದು ಎಂದು ಗುಡುಗಿದ್ದಾರೆ. 
 
ಪಾಕಿಸ್ತಾನ ಕಲಾವಿದರಿಗೆ ಭಾರತದಲ್ಲಿ ನಿಷೇಧ ಹೇರಿರುವುದಕ್ಕೆ ಪ್ರತಿಕ್ರಿಯಿಸಿದ್ದ ಸಲ್ಮಾನ್ ಅವರು ಕಲಾವಿದರೇ ಹೊರತು ಭಯೋತ್ಪಾದಕರಲ್ಲ ಎಂದಿದ್ದರು. ಈ ಹಿನ್ನೆಲೆಯಲ್ಲಿ ಸಾಧ್ವಿ ಕಿಡಿಕಾರಿದ್ದಾರೆ. 
 
ನೆರೆ ರಾಷ್ಟ್ರದೊಂದಿಗೆ ಶಾಂತಿ, ಸೌಹಾರ್ದತೆಯಿಂದ ಇರಬೇಕು ಎಂಬುದೇನೋ ಸರಿಯಾದುದು. ಆದರೆ ನೆರೆಯ ದೇಶ ಹದ್ದುಮೀರಿ ವರ್ತಿಸಿದರೆ ಅದಕ್ಕೆ ತಕ್ಕ ಪಾಠ ಕಲಿಸಬೇಕಾದುದು ಕೂಡ ಅತ್ಯಗತ್ಯ. ಕೆಲವು ದೆವ್ವಗಳು ಮಾತಿಂದ ಅರ್ಥ ಮಾಡಿಕೊಳ್ಳುವುದಿಲ್ಲ. ಅವುಗಳಿಗೆ ಲತ್ತೆ ಪೆಟ್ಟು ಕೊಡಲೇಬೇಕಾಗುತ್ತದೆ ಎಂದಿದ್ದಾರೆ. 
 
ಪಾಕ್ ಕಲಾವಿದರು ಭಾರತಕ್ಕೆ ಬಂದು ಕಾರ್ಯಕ್ರಮವನ್ನು ನೀಡುವುದಕ್ಕೆ ಅನೇಕ ಹಿಂದೂ ಸಂಘಟನೆಗಳು ವಿರೋಧಿಸುತ್ತಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಾವೇರಿ ವಿವಾದ: ರಾಜ್ಯದ ಪರ ನಿಂತ ಕೇಂದ್ರ ಸರಕಾರ