ಆರೆಸ್ಸೆಸ್ ಸಂಘಟನೆಯ ದೂರದೃಷ್ಟಿ ಎಂದರೆ ಮಾನವೀಯತೆಯ ಅಭಿವೃದ್ಧಿ. ಮುಂದೆ ಭವಿಷ್ಯದಲ್ಲಿ ಭಾರತದ ದೂರದೃಷ್ಟಿಯು ಅದೇ ಆಗಿರಲಿದೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಭಿಲ್ವಾರಾದಲ್ಲಿ ಆರೆಸ್ಸೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಶ್ವ ಮತ್ತು ದೇಶಗಳ ಮಾನವೀಯತೆಯ ಅಭಿವೃದ್ಧಿಯೇ ಆರೆಸ್ಸೆಸ್ ಗುರಿ. ಭಾರತ ದೇಶದ ಗುರಿಯ ಒಂದೇ ಆಗಿದೆ ಎಂದು ತಿಳಿಸಿದ್ದಾರೆ.
ಆರೆಸ್ಸೆಸ್ ಕಾರ್ಯಕರ್ತರು ತ್ಯಾಗ ಮನೋಭಾವದಿಂದ ಕರ್ತವ್ಯ ನಿರ್ವಹಿಸಿ ದೇಶವನ್ನು ಉತ್ತಂಗ ಸ್ಥಿತಿಗೆ ತೆಗೆದುಕೊಂಡು ಹೋಗಿ ದೇಶವನ್ನು ಏಳಿಗೆಯತ್ತ ಕರೆದುಕೊಂಡು ಹೋಗಬೇಕು ಎಂದು ಕರೆ ನೀಡಿದರು.
ಸಮಾಜವನ್ನು ಉತ್ತಮಗೊಳಿಸಿದಲ್ಲಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಆರೆಸ್ಸೆಸ್ ಸಂಘಟನೆಯ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ.
ಇಡೀ ಸಮಾಜದ ಒಂದುಗೂಡಿಸಲು ಮತ್ತು ರಾಷ್ಟ್ರದ ಅಭಿವೃದ್ಧಿ ಸಲುವಾಗಿ, ನಾವು ನಮ್ಮ ಪ್ರತಿಸ್ಪರ್ಧಿಗಳನ್ನು ಒಂದುಗೂಡಿಸಿ ಅವರನ್ನು ನಮಗೆ ಜೊತೆಗೆ ಕರೆದುಕೊಂಡು ಹೋಗುವುದು ಅವಶ್ಯಕವಾಗಿದೆ ಎಂದು ಹೇಳಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.