ರಂಜಾನ್ ತಿಂಗಳಲ್ಲಿ ನಡೆಸುವ ಇಫ್ತಾರ್ ಕೂಟಗಳಲ್ಲಿ ಹಾಲು ಮತ್ತು ಅದರ ಉತ್ಪನ್ನಗಳನ್ನು ಮಾತ್ರವೇ ಬಳಸಲಾಗುವುದು ಎಂದು ಉತ್ತರಪ್ರದೇಶದ ಆರ್‌ಎಸ್‌ಎಸ್‌ನ ಅಂಗಸಂಸ್ಥೆ ಮುಸ್ಲಿಮ್ ರಾಷ್ಟ್ರೀಯ ಮಂಚ್(ಎಂಆರ್ ಎಂ) ಹೇಳಿದೆ. ಈ ಮೂಲಕ ಈ ಬಾರಿಯ ಇಫ್ತಾರ್ ಕೂಟವನ್ನು ಸಸ್ಯಹಾರಿ ಕೂಟವನ್ನಾಗಿಸಲು ನಿರ್ಧರಿಸಿದೆ
‘ಗೋವು ಉಳಿಸಿ’ ಎಂಬ ಸಂದೇಶವನ್ನು ಪ್ರಚಾರ ಮಾಡುತ್ತಿರುವ ಸಂಘಟನೆಯು ‘ಮಾಂಸಾಹಾರ ಸೇವನೆ ಅನಾರೋಗ್ಯಕ್ಕೆ ಆಹ್ವಾನ ನೀಡಿದಂತೆ’ ಎಂದೂ ಹೇಳಿದೆ.
ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನಷ್ಟೇ ಬಳಕೆ ಮಾಡಲು ಎಂಆರ್ ಎಂ ತೀರ್ಮಾನಿಸಲಾಗಿದ್ದು, ಇದೇ ಮೊದಲಬಾರಿಗೆ ಹಾಲು ಸೇವಿಸಿ ಉಪವಾಸ ಅಂತ್ಯಗೊಳಿಸಲು ನಿರ್ಧರಿಸಲಾಗಿದೆ ಸಂಘಟನೆಯ ರಾಷ್ಟ್ರೀಯ ಸಹ ಸಂಚಾಲಕ ಮಹಿರಾಜ್ ಧ್ವಜ್ ಸಿಂಗ್ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.