ತಿರುವನಂತನಪುರಂ : 2022ರ ಏಪ್ರಿಲ್ನಲ್ಲಿ ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ನಡೆದಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ಶ್ರೀನಿವಾಸನ್ ಅವರ ಹತ್ಯೆ ಪ್ರಕರಣದಲ್ಲಿ ಬೇಕಾಗಿದ್ದ ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸದಸ್ಯನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬುಧವಾರ ಬಂಧಿಸಿದೆ.
ಆರೋಪಿ ಸಹೀರ್ ಕೆವಿ ಕೃತ್ಯದ ನಂತರ ತಲೆಮರೆಸಿಕೊಂಡಿದ್ದ. ಅಲ್ಲದೆ ಹತ್ಯೆಯಲ್ಲಿ ಪಾಲ್ಗೊಂಡಿದ್ದ ಆರೋಪಿಗಳಿಗೆ ಆಶ್ರಯ ನೀಡಿದ್ದ. ಆತನ ಸುಳಿವು ನಿಡಿದವರಿಗೆ 4 ಲಕ್ಷ ರೂ. ಬಹುಮಾನ ನೀಡುವುದಾಗಿ ಎನ್ಐಎ ಘೋಷಣೆ ಮಾಡಿತ್ತು. ಪಾಲಕ್ಕಾಡ್ ಸಂಬಂಧಿಕರ ಮನೆಯಲ್ಲಿ ಆತ ಅಡಗಿರುವುದನ್ನು ಪತ್ತೆಹಚ್ಚಿದ್ದ ಎನ್ಐಎ ಬಂಧಿಸಿದೆ.
ಪಿಎಫ್ಐನ ಪಟ್ಟಾಂಬಿ ಏರಿಯಾ ಅಧ್ಯಕ್ಷನಾಗಿದ್ದ ಆರೋಪಿಯು ಸಮುದಾಯದ ಸದಸ್ಯರಲ್ಲಿ ಭಯೋತ್ಪಾದನೆಯ ವಿಚಾರಗಳನ್ನು ಬಿತ್ತುತ್ತಿದ್ದ. 2047ರ ಹೊತ್ತಿಗೆ ಇಸ್ಲಾಮಿಕ್ ಆಳ್ವಿಕೆಯನ್ನು ಸ್ಥಾಪಿಸುವ ಉದ್ದೇಶದಿಂದ ಸಂಘಟನೆಯ ಸದಸ್ಯರನ್ನು ತಯಾರಿ ಮಾಡುತ್ತಿದ್ದ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.