500 ಮತ್ತು 1,000 ರೂಪಾಯಿ ಮುಖಬೆಲೆಯ ನೋಟುಗಳ ನಿಷೇಧದ ಆಘಾತದಿಂದ ದೇಶವಾಸಿಗಳಿನ್ನು ಹೊರಬಂದಿಲ್ಲ. ಮತ್ತೀಗ 2,000 ರೂಪಾಯಿ ನೋಟುಗಳು ಸಹ ನಿಷೇಧವಾಗಲಿವೆ ಎಂಬ ಮಾತು ಕೇಳಿ ಬರತೊಡಗಿದೆ. ಇದನ್ನು ಹೇಳಿದ್ದು ಬೇರೆ ಯಾರೋ ಅಲ್ಲ. 500, 1000 ರೂ. ಮುಖಬೆಲೆಯ ನೋಟು ನಿಷೇಧ ಯೋಜನೆಯ ಸಲಹೆಗಾರ ಅನಿಲ್ ಬೊಕಿಲ್.
ಹೌದು, 2000 ರೂಪಾಯಿ ಮುಖಬೆಲೆಯ ನೋಟುಗಳು ನಿಷೇಧಗೊಳ್ಳುವ ಸಾಧ್ಯತೆಗಳಿವೆ. ಅದು ಕೂಡ ಸದ್ಯದಲ್ಲಿಯೇ ಅನ್ನುತ್ತಾರೆ ಬೋಕಿಲ್.
ಕಾರ್ಯಕ್ರಮವೊಂದರಲ್ಲಿ ಬೊಕಿಲ್ ಅವರಿಗೆ ನೋಟು ನಿಷೇಧ ಯಶಸ್ವಿಯಾಗಿದೆ ಎಂದು ನಿಮಗನ್ನಿಸುತ್ತದೆಯೇ? ಎಂದು ಪ್ರಶ್ನಿಸಲಾಗಿ ನೋಟು ನಿಷೇಧಗೊಂಡ ಬಳಿಕ ಆರ್ಥಿಕತೆ ಮೇಲೆ ಹೆಚ್ಚಿನ ಕೆಟ್ಟ ಪರಿಣಾಮ ಆಗದಿರಲೆಂದು ತಾತ್ಕಾಲಿಕ ಪರಿಹಾರಕ್ಕಾಗಿ 2,000 ರೂಪಾಯಿ ನೋಟುಗಳನ್ನು ಬಿಡುಗಡೆ ಮಾಡಲಾಗಿದೆ. 2019ರ ಚುನಾವಣೆಗೂ ಮುನ್ನ 2 ಸಾವಿರ ನೋಟು ನಿಷೇಧಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ಬಡತನ ರೇಖೆಗಿಂತ ಕೆಳಗಿರುವವರು 50 ಮತ್ತು 100ರೂಪಾಯಿಗಿಂತ ಹೆಚ್ಚಿನ ಹಣವನ್ನು ಖರ್ಚು ಮಾಡಲು ಸಾಧ್ಯವಿಲ್ಲ. ಕಡಿಮೆ ಮುಖಬೆಲೆ ನೋಟುಗಳೇ ಅವರ ಪ್ಯಾಪಾರ ವಹಿವಾಟಿಗೆ ಸಾಕಾಗುತ್ತದೆ. ಆದರೆ ಭಾರತದಲ್ಲಿ ಹೆಚ್ಚಿನವರು ಅನಕ್ಷರಸ್ಥರಾಗಿರುವುದರಿಂದ ನಗರದು ರಹಿತ ಅರ್ಥವ್ಯವಸ್ಥೆ ಕಷ್ಟ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.