ನರೇಂದ್ರ ಮೋದಿ ಪ್ರಧಾನಿಯಾಗಿದ್ದಾಗಿನಿಂದ ಎಲ್ಲರೂ ಅವರ ಕಠಿಣ ದಿನಚರಿಯ ಬಗ್ಗೆ ಚರ್ಚಿಸುತ್ತಿದ್ದಾರೆ. ದಿನದ 24 ಗಂಟೆಯಲ್ಲಿ 16 ರಿಂದ 18 ಗಂಟೆ ಅವರು ಕೆಲಸದಲ್ಲಿ ಸಕ್ರಿಯರಾಗಿರುತ್ತಾರೆ. ಮಧ್ಯದಲ್ಲಿ ಒಮ್ಮೆಯೂ ವಿಶ್ರಾಂತಿ ತೆಗೆದುಕೊಳ್ಳದೆ ಅವರು ಕೆಲಸದಲ್ಲಿ ವ್ಯಸ್ತರಾಗಿರುತ್ತಾರೆ. ಆದರೂ ಅವರು ಆರೋಗ್ಯವನ್ನು ಇತರರಿಗೆ ಮಾದರಿ ಎಂಬಂತೆ ಕಾಪಾಡಿಕೊಂಡಿದ್ದಾರೆ. ಅವರ ಈ ಆರೋಗ್ಯದ ಗುಟ್ಟು ಯೋಗ ಮತ್ತು ಆರೋಗ್ಯಕರ ಡಯಟ್ ಎಂಬುದು ಎಲ್ಲರಿಗೂ ಗೊತ್ತು. ಆದರೆ ನಿಮಗೆಲ್ಲರಿಗೂ ತಿಳಿಯದ ಒಂದು ಗುಟ್ಟಿದೆ. ಒಂದು ನಿರ್ದಿಷ್ಟ ಆಹಾರ ಅವರನ್ನು ಇಷ್ಟು ಆರೋಗ್ಯಕರವಾಗಿಟ್ಟಿದೆಯಂತೆ? ಅದೇನು ಅಂತೀರಾ? ತಿಳಿಯಲು ಮುಂದೆ ಓದಿ.
ಪ್ರಧಾನಿ ಮೋದಿ ಅಣಬೆಯನ್ನು ತಿನ್ನುತ್ತಾರೆ ಎಂಬುದು ಕೆಲವೇ ಕೆಲವರಿಗೆ ತಿಳಿದ ಸಂಗತಿ. ಮೋದಿ ಪ್ರತಿದಿನ ಅದನ್ನು ತಿನ್ನುತ್ತಾರಂತೆ. ಅದೊಂದು ವಿಶೇಷ ಅಣಬೆ. ಹಿಮಾಚಲದಲ್ಲಿ ಬೆಳೆಯುವ ಈ ಅಣಬೆ ಬೆಲೆ ಎಷ್ಟು ಗೊತ್ತೇ? ಕೆ.ಜಿಗೆ ಬರೊಬ್ಬರಿ 30,000 ರೂಪಾಯಿ.
ಸ್ವತಃ ಮೋದಿ ಈ ಗುಟ್ಟನ್ನು ಹೊರ ಹಾಕಿದ್ದಾರೆ. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಪಕ್ಷದ ಕಾರ್ಯ ನಿಮಿತ್ತ ಹಿಮಾಚಲದಲ್ಲಿದ್ದಾಗಿನಿಂದ ತಾವಿದನ್ನು ಸೇವಿಸುತ್ತಿರುವುದಾಗಿ ಅವರು ಹೇಳಿದ್ದಾರೆ.
ಗುಜರಾತ್ ಮುಖ್ಯಮಂತ್ರಿಯಾದ ಬಳಿಕ ವರದಿಗಾರರೊಂದಿಗಿನ ಅನಧಿಕೃತ ಮಾತುಕತೆಯಲ್ಲಿ ಮೋದಿ ಈ ಸತ್ಯವನ್ನು ಹೊರ ಹಾಕಿದ್ದರು.
"ನನ್ನ ಉತ್ತಮ ಆರೋಗ್ಯದ ಗುಟ್ಟು ಹಿಮಾಚಲ ಪ್ರದೇಶದ ಅಣಬೆ. ಅವರು ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ", ಎಂದು ಅವರು ಹೇಳಿದ್ದರು.
ಈ ಅಣಬೆಯ ವೈಜ್ಞಾನಿಕ ಹೆಸರು Morchella esculenta. ಇದು ಸಾಮಾನ್ಯವಾಗಿ ಹಿಮಾಚಲ ಪ್ರದೇಶದಲ್ಲಿ ಕಂಡುಬರುತ್ತದೆ. ಜಾಗತಿಕಮಟ್ಟದಲ್ಲಿ ಇದಕ್ಕೆ ಬಹಳ ಬೇಡಿಕೆ ಇದೆ.
ಹಿಮಾಚಲದ ಹಳ್ಳಿಗರ ಆದಾಯದ ಪ್ರಮುಖ ಮೂಲವಿದು. ಮಾರ್ಚ್ ತಿಂಗಳಿಂದ ಮೇ ತಿಂಗಳವರೆಗೆ ಇದನ್ನು ಸಂಗ್ರಹಿಸಿಸುವ ಜನರು ಒಣಗಿಸಿ ಮಾರುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ .