Webdunia - Bharat's app for daily news and videos

Install App

ಕಾಣೆಯಾದ ವಿಮಾನ ಪ್ರಕರಣದಲ್ಲಿ ಹೊಸ ಟ್ವಿಸ್ಟ್

Webdunia
ಶನಿವಾರ, 30 ಜುಲೈ 2016 (14:24 IST)
ಕಾಣೆಯಾದ ವಿಮಾನ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್ ದೊರೆತಿದೆ. ಅಪಘಾತವಾಗಿದೆ ಎಂದು ಉಹಿಸಲಾದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯ ಕುಟುಂಬದವರು ಆತನ ಫೋನ್ ಇವತ್ತಿಗೂ ಚಾಲನೆಯಲ್ಲಿದೆ ಎಂದು ವಾಯುಸೇನೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. 
 
ಏರ್‌ಮ್ಯಾನ್ ರಘುಬೀರ್ ಸಂಬಂಧಿಕರು ಮಾಧ್ಯಮಗಳಿಗೆ ಮಾಹಿತಿ ನೀಡಿ, ಆತನ ಪೋನ್ ರಿಂಗ್ ಆಗುತ್ತಿದ್ದು ಆತನ ವಾಟ್ಸಪ್ ಸ್ಟೇಟಸ್ ಕೊನೆಯದಾಗಿ 26ನೇ ಜುಲೈ ತೋರಿಸುತ್ತಿದೆ ಎಂದು ತಿಳಿಸಿದ್ದಾರೆ.
 
ಕಳೆದ ಜುಲೈ 22 ರಂದು ಚೆನ್ನೈನ ತಾಂಬರಂ ಏರ್‌ಬೇಸ್‌ನಿಂದ ಹಾರಿದ ವಿಮಾನ ಕೇವಲ 16 ನಿಮಿಷಗಳಲ್ಲಿಯೇ ಕಾಣೆಯಾಗಿತ್ತು. ಕಾಣೆಯಾದ ವಿಮಾನದ ಪತ್ತೆಗಾಗಿ ವಾಯುದಳ, ನೌಕಾದಳ ಭಾರಿ ಕಾರ್ಯಾಚರಣೆ ನಡೆಸಿದ್ದವು. ಇತ್ತೀಚಿನ ಬೆಳವಣಿಗೆಗಳಿಂದ ರಘುಬೀರ್ ಜೀವಂತವಾಗಿರಬಹುದು ಎನ್ನುವ  ಆಶಾಭಾವನೆ ಆತನ ಕುಟುಂಬದವರಲ್ಲಿ ಮೂಡಿದೆ
 
ರಘುಬೀರ್ ಕುಟುಂಬದವರು ಕೂಡಲೇ ವಾಯುಸೇನೆ ಅಧಿಕಾರಿಗಳು ಮತ್ತು ಅಪರಾಧ ದಳದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ವಾಯುಸೇನೆ ಅಧಿಕಾರಿಗಳು ರಘುಬೀರ್ ಫೋನ್ ಕರೆಗಳ ವಿವರಗಳನ್ನು ಪಡೆದು ತನಿಖೆ ಆರಂಭಿಸಿದ್ದಾರೆ. ಇಂತಹ ಬೆಳವಣಿಗೆ ಪ್ರಕರಣವನ್ನು ಮತ್ತಷ್ಟು ನಿಗೂಢವಾಗಿಸಿದೆ ಎಂದು ವಾಯುದಳದ ಅಧಿಕಾರಿಗಳು ತಿಳಿಸಿದ್ದಾರೆ. 
 
ಪ್ರಸ್ತುತ, ಅನೇಕ ವಿಮಾನಗಳು, ಹಡಗುಗಳು ಮತ್ತು ಸಬ್‌ಮರಿನ್‌ ಹಾಗೂ ಖಾಸಗಿ ವಿಮಾನಗಳು ಕೂಡಾ ಕಾಣೆಯಾದ ವಿಮಾನದ ಪತ್ತೆಗಾಗಿ ಹರಸಾಹಸ ಪಡುತ್ತಿವೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments