ಮುಂಬೈ : ಸಾಕು ನಾಯಿಯಿಂದ ದಾಳಿಗೊಳಗಾದ ಮಹಿಳೆಗೆ 2 ಲಕ್ಷ ಮಧ್ಯಂತರ ಪರಿಹಾರವನ್ನು ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಗುರುಗ್ರಾಮ್ ಮಹಾನಗರ ಪಾಲಿಕೆಗೆ (ಎಂಸಿಜಿ) ಆದೇಶಿಸಿದೆ.
ಎಂಸಿಜಿ ಬಯಸಿದರೆ ಈ ಪರಿಹಾರದ ಮೊತ್ತವನ್ನು ನಾಯಿ ಮಾಲೀಕರಿಂದ ವಸೂಲಿ ಮಾಡಬಹುದು ಎಂದು ಮಹಾನಗರ ಪಾಲಿಕೆ ತಿಳಿಸಿದೆ.
ಸಂತ್ರಸ್ತೆ ಮುನ್ನಿ ಸ್ಥಳೀಯರೊಬ್ಬರು ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆಗಸ್ಟ್ 11 ರಂದು ತನ್ನ ಅತ್ತಿಗೆಯೊಂದಿಗೆ ಕೆಲಸಕ್ಕೆಂದು ಹೋಗುತ್ತಿದ್ದಾಗ ಮುನ್ನಿ ಮೇಲೆ ನಾಯಿ ದಾಳಿ ಮಾಡಿದೆ.
ಇದರಿಂದ ತಲೆ ಮತ್ತು ಮುಖದ ಮೇಲೆ ಗಂಭೀರವಾದ ಗಾಯಗಳಾಗಿದ್ದರಿಂದ ಗುರುಗ್ರಾಮ್ನ ಸಿವಿಲ್ ಆಸ್ಪತ್ರೆಯಿಂದ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ಮಹಿಳೆಯನ್ನು ದಾಖಲಿಸಲಾಯಿತು.
ಮಹಿಳೆ ಬಹಳ ಬಡವಿಯಾಗಿದ್ದು, ಆಕೆಗೆ ನ್ಯಾಯ ದೊರಕಿಸಿ ಕೊಡುವ ಸಲುವಾಗಿ ಎಂಸಿಜಿಯಿಂದ ಮಧ್ಯಂತರ ಪರಿಹಾರವಾಗಿ 2 ಲಕ್ಷ ರೂಪಾಯಿಗಳನ್ನು ಪಾವತಿಸಲು ಆದೇಶಿಸಲಾಗಿದೆ.