ನವದೆಹಲಿ : ಬೆಳವಣಿಗೆಗೆ ಅಪಾರ ಅವಕಾಶಗಳನ್ನು ಹೊಂದಿರುವ ಪ್ರಸಾಧನ ಸಾಮಗ್ರಿಗಳ ಆನ್ಲೈನ್ ಮಾರಾಟ ಕ್ಷೇತ್ರಕ್ಕೆ ಲಗ್ಗೆ ಹಾಕಲು ರಿಲಯನ್ಸ್ ಸಂಸ್ಥೆಯ ಮಾಲೀಕ ಮುಕೇಶ್ ಅಂಬಾನಿ ಸಿದ್ಧವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ನೈಕಾ, ಮಿಂತ್ರಾ, ಟಾಟಾ ಕ್ಲಿಕ್ ಹಾಗೂ ಇನ್ನಿತರ ಕಂಪನಿಗಳು ಸ್ಪರ್ಧಾತ್ಮಕವಾಗಿ ವ್ಯವಹಾರಕ್ಕಿಳಿದಿವೆ. ಈ ಕಂಪನಿಗಳಿಗೆ ಪೈಪೋಟಿ ಒಡ್ಡಿ, ಈ ಕ್ಷೇತ್ರದಲ್ಲೂ ರಿಲಯನ್ಸ್ನದ್ದೊಂದು ಅಸ್ತಿತ್ವ ಸ್ಥಾಪಿಸುವ ನಿಟ್ಟಿನಲ್ಲಿ ಅಂಬಾನಿ ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ.
ಈಗಾಗಲೇ ಆನ್ಲೈನ್ ಮಾರುಕಟ್ಟೆಯಲ್ಲಿ ಸಕ್ರಿಯವಾಗಿರುವ ರಿಲಯನ್ಸ್ ರಿಟೇಲ್ ಸಂಸ್ಥೆಯಲ್ಲಿ ಪ್ರಸಾಧನ ಸಾಮಗ್ರಿಗಳ ಮಾರಾಟಕ್ಕಾಗಿಯೇ ಹೊಸ ಸಂಸ್ಥೆ ತೆರೆದು ವಿಶ್ವದ ಅತಿ ದೊಡ್ಡ ಪ್ರಸಾದನ ಮಾರಾಟ ಸಂಸ್ಥೆಗಳಲ್ಲೊಂದಾದ ಎಲ್ವಿಎಂಎಚ್ ಸೆಫೋರಾದಂಥ ದೈತ್ಯ ಸಂಸ್ಥೆ ಕಟ್ಟುವ ಇರಾದೆ ಅಂಬಾನಿಯವರದ್ದು ಎನ್ನಲಾಗಿದೆ.