Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಆರೋಗ್ಯದಲ್ಲಿ ಚೇತರಿಕೆ, ಆಸ್ಪತ್ರೆಯಿಂದ ಎಲ್‌ಕೆ ಅಡ್ವಾಣಿ ಡಿಸ್ಚಾರ್ಜ್‌

ಆರೋಗ್ಯದಲ್ಲಿ ಚೇತರಿಕೆ, ಆಸ್ಪತ್ರೆಯಿಂದ ಎಲ್‌ಕೆ ಅಡ್ವಾಣಿ ಡಿಸ್ಚಾರ್ಜ್‌

Sampriya

ನವದೆಹಲಿ , ಗುರುವಾರ, 27 ಜೂನ್ 2024 (15:09 IST)
Photo Courtesy X
ನವದೆಹಲಿ: ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಉಪ ಪ್ರಧಾನಿ ಲಾಲ್‌ ಕೃಷ್ಣ ಅಡ್ವಾಣಿ ಅವರ ಆರೋಗ್ಯದಲ್ಲಿ ಚೇತರಿಸಿಕೊಂಡಿದ್ದು, ಇಂದು ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

96 ವರ್ಷ ವಯಸ್ಸಿನ ಎಲ್‌ಕೆ ಅಡ್ವಾಣಿ ಅವರು ವಯೋಸಹಜ ಖಾಯಿಲೆಯಿಂದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಬುಧವಾರ ರಾತ್ರಿ 10.30ರ ಸುಮಾರಿಗೆ ಅಡ್ವಾಣಿ ಅವರನ್ನು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ (ಎಐಐಎಂಎಸ್) ಹಳೆಯ ಖಾಸಗಿ ವಾರ್ಡ್‌ಗೆ ದಾಖಲಿಸಲಾಗಿತ್ತು.

"ಎಲ್ ಕೆ ಅಡ್ವಾಣಿ ಅವರು ಸ್ಥಿರವಾಗಿದ್ದು, ಅವರಿಗೆ ಮೂತ್ರಶಾಸ್ತ್ರ, ಹೃದ್ರೋಗ ಮತ್ತು ಜೆರಿಯಾಟ್ರಿಕ್ ಮೆಡಿಸಿನ್ ಸೇರಿದಂತೆ ವಿವಿಧ ವಿಶೇಷತೆಗಳ ವೈದ್ಯರ ತಂಡ ಅವರನ್ನು ಪರಿಕ್ಷೀಸುತ್ತಿದೆ ಎಂದು ಹೇಳಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಕುರ್ಚಿ ಡಿಕೆ ಶಿವಕುಮಾರ್ ಗೆ ಬಿಟ್ಟುಕೊಡಿ: ಸಿದ್ದರಾಮಯ್ಯ ಸಮ್ಮುಖದಲ್ಲೇ ಚಂದ್ರಶೇಖರ ಸ್ವಾಮೀಜಿ ಹುಕುಂ