ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಸಂಯುಕ್ತ ಜನತಾದಳ (ಜೆಡಿಯು) ನಾಯಕರು ಬಂಡಾಯ ಕಹಳೆ ಮೊಳಗಿಸಿದ್ದು, ಉದಯ್ ನಾರಾಯಣ್ ಚೌಧರಿ ಅವರಿಗೆ ಬೆಂಬಲ ಸೂಚಿಸಿ 300 ಕ್ಕೂ ಹೆಚ್ಚು ಕಾರ್ಯಕರ್ತರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ದಲಿತ ಮುಖಂಡರೂ ಆದ ಚೌಧರಿ ಅವರ ಪ್ರಾಬಲ್ಯವಿರುವ ಗಯಾ ಜಿಲ್ಲೆಯ ನಕ್ಸಲ್ ಹಾವಳಿ ಪೀಡಿತ ಇಮಾಂಗಂಜ್ ವಿಧಾನಸಭಾ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರು ಜೆಡಿಯು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ನಿತೀಶ್ ಕುಮಾರ್ ಅವರ ರಾಜಕೀಯ ವೈರಿ ರಾಷ್ಟ್ರೀಯ ಜನತಾ ದಳ (ಆರ್‍ಜೆಡಿ) ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರಿಗೆ ಉದಯ ನಾರಾಯಣ ಚೌಧರಿ ಬಹಿರಂಗ ಬೆಂಬಲ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.