ಪಾಟ್ನಾ : ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಆರ್ ಜೆಡಿ ಶಾಸಕ ರಾಜ್ ಬಲ್ಲಭ್ ಯಾದವ್ ಅಪರಾಧಿ ಎಂದು ಕೋರ್ಟ್ ಆದೇಶಿಸಿದೆ.
2016 ಫೆಬ್ರವರಿ 6ರಂದು ಮನೆಯಿಂದ ಹೊರಕ್ಕೆ ಹೋಗಿದ್ದ ಬಾಲಕಯನ್ನು ಅಪಹರಿಸಿದ ಐವರು ಕಾಮುಕರು ಶಾಸಕರ ಬಳಿಗೆ ಕರೆದುಕೊಂಡು ಬಂದು ಮದ್ಯಪಾನ ಮಾಡಿಸಿ ಅತ್ಯಾಚಾರ ಮಾಡಿದ್ದರು. ಈ ಘಟನೆಯ ಬಗ್ಗೆ ಬಾಲಕಿ ಮನೆಯವರಿಗೆ ತಿಳಿಸಿದ ಹಿನ್ನಲೆಯಲ್ಲಿ ನಲಂದಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಐಪಿಸಿ ಸೆಕ್ಷನ್ 164ರ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಫ್ ಐಆರ್ ಹಾಕಿದ್ದರು.
ಘಟನೆ ಬಗ್ಗೆ ಎಫ್ ಐಆರ್ ವರದಿಗಳು ಬರುತ್ತಿದ್ದಂತೆ ತಕ್ಷಣವೇ ಶಾಸಕ ರಾಜ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಆದರೆ ಇದೀಗ ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲದ ವಿಶೇಷ ನ್ಯಾಯಾಧೀಶ ಪರಶುರಾಮ ಯಾದವ್ ಅವರು ಆರ್ ಜೆಡಿ ಶಾಸಕ ರಾಜ್ ಬಲ್ಲಭ್ ಒಳಗೊಂಡಂತೆ ಇತರೆ ಐವರನ್ನು ಅಪರಾಧಿಗಳು ಎಂದು ಹೇಳಿ ಆದೇಶ ಹೊರಡಿಸಿದ್ದಾರೆ, ಆದರೆ ಶಿಕ್ಷೆ ಪ್ರಮಾಣವನ್ನು ಇನ್ನು ಪ್ರಕಟಿಸಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.