Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರೇಪ್, ಬ್ಲ್ಯಾಕ್‌ಮೇಲ್, ಹಣವಸೂಲಿಗೈಯುತ್ತಿದ್ದ ಆರೋಪಿ ಅರೆಸ್ಟ್

ರೇಪ್, ಬ್ಲ್ಯಾಕ್‌ಮೇಲ್, ಹಣವಸೂಲಿಗೈಯುತ್ತಿದ್ದ ಆರೋಪಿ ಅರೆಸ್ಟ್
ಚೆನ್ನೈ , ಮಂಗಳವಾರ, 28 ನವೆಂಬರ್ 2017 (13:28 IST)
ನಗರದಲ್ಲಿ ನಡೆದ ಲೈಂಗಿಕ ದೌರ್ಜನ್ಯದ ಮತ್ತೊಂದು ಆಘಾತಕಾರಿ ಪ್ರಕರಣದಲ್ಲಿ 17 ವರ್ಷದ ಯುವತಿಯೊಬ್ಬಳು ಆರೋಪಿಯೊಬ್ಬನ ವಿರುದ್ಧ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ರೇಪ್, ಬ್ಲ್ಯಾಕ್‌ಮೇಲ್ ಮತ್ತು ಸುಲಿಗೆ ಪ್ರಕರಣ ದಾಖಲಿಸಿದ್ದಾಳೆ.
 
 ಕಳೆದ ನಾಲ್ಕು ವರ್ಷಗಳ ಹಿಂದೆ ಸಾಮಾಜಿಕ ಅಂತರ್ಜಾಲ ತಾಣವಾದ ಫೇಸ್‌‌ಬುಕ್‌ನಲ್ಲಿ ಪರಿಚಯವಾದ 21 ವರ್ಷದ ಯುವಕ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಬಿಎ ಓದುತ್ತಿರುವ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
 
ಆರೋಪಿ 21 ವರ್ಷ ವಯಸ್ಸಿನ ಮೋನಿ ಎಂಬಾತ 2013 ರಲ್ಲಿ ಯುವತಿಯನ್ನು ಲಾಡ್ಜ್‌ಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿ ನಗ್ನ ಚಿತ್ರಗಳನ್ನು ತೆಗೆದಿದ್ದ ಎನ್ನಲಾಗಿದೆ.
 
ನಾವಿಬ್ಬರು ಪರಸ್ಪರ ಪ್ರೀತಿಸುತ್ತಿರುವುದರಿಂದ ನಾನು ಆತನ ವರ್ತನೆಯನ್ನು ಆಕ್ಷೇಪಿಸಲಿಲ್ಲ. ಆದರೆ, ನಂತರ ಆತ ನಾನು ಹೇಳಿದ ಹಾಗೆ ಕೇಳದಿದ್ದರೇ ನಗ್ನಚಿತ್ರಗಳನ್ನು ಬಿಡುಗಡೆಗೊಳಿಸುವುದಾಗಿ ಬೆದರಿಕೆ ಒಡ್ಡಿದಾಗ ನಾನು ಬೆದರಿದ್ದೆ ಎಂದು ಯುವತಿ ತಿಳಿಸಿದ್ದಾಳೆ.
 
ಆರೋಪಿ ಮೋನಿ, ಯುವತಿಯನ್ನು ಬೆದರಿಸಿ 1.5 ಲಕ್ಷ ರೂಪಾಯಿಗಳನ್ನು ಸುಲಿಗೆ ಮಾಡಿದ್ದಲ್ಲದೇ ತನ್ನ ಗೆಳೆಯ 23 ವರ್ಷ ವಯಸ್ಸಿನ ರವೀಂದ್ರನ್‌ ಶರ್ಮಾ ಅವನೊಂದಿಗೆ ಸೆಕ್ಸ್ ಮಾಡುವಂತೆ ಒತ್ತಡ ಹೇರಿದ್ದ ಎಂದು ದೂರಿನಲ್ಲಿ ದಾಖಲಿಸಲಾಗಿದೆ. 
 
ಕಳೆದ ವರ್ಷ ಯುವತಿ ಗರ್ಭವತಿಯಾದಾಗ ಮೋನಿ ಮತ್ತು ರವೀಂದ್ರನ್ ಮಾತ್ರೆಗಳನ್ನು ನೀಡಿ ಗರ್ಭಪಾತ ಮಾಡಿಸಿದ್ದರು ಎಂದು ತಿಳಿಸಿದ್ದಾಳೆ.
 
ಯುವತಿಯ ಪೋಷಕರಿಗೆ ಪುತ್ರಿಯ ಮೇಲೆ ನಡೆದ ಅತ್ಯಾಚಾರದ ಬಗ್ಗೆ ಮಾಹಿತಿ ಗೊತ್ತಾಗಿ ರವೀಂದ್ರನ್ ತಂದೆಗೆ ಇಬ್ಬರ ವಿವಾಹ ಮಾಡುವಂತೆ ಒತ್ತಾಯಿಸಿದ್ದಾರೆ. ಆದರೆ, ರವೀಂದ್ರನ್ ತಂದೆ ತಮ್ಮ ಪುತ್ರನಿಗೆ ಯುವತಿ ಎರಡನೇ ಪತ್ನಿಯಾಗಿ ಬೇಕಾದರೆ ಬರಬಹುದು ಎಂದು ಹೇಳಿದ್ದಾರೆ.
 
ಇದೇ ಸಂದರ್ಭದಲ್ಲಿ ಮತ್ತೆ ಯುವತಿಗೆ 5 ಲಕ್ಷ ರೂಪಾಯಿ ನೀಡುವಂತೆ ಮೋನಿ ಒತ್ತಾಯಿಸಿದ್ದಾನೆ. ಕೊನೆಗೆ ಆರೋಪಿಯ ವರ್ತನೆಯಿಂದ ಬೇಸತ್ತು ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.
 
ಪೊಲೀಸರು ಆರೋಪಿ ರವೀಂದ್ರ ಶರ್ಮನ್‌ನನ್ನು ಬಂಧಿಸಿದ್ದು, ಪ್ರಮುಖ ಆರೋಪಿ ಮೋನಿಗಾಗಿ ಹುಡುಕಾಟ ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳಾ ನ್ಯಾಯಮೂರ್ತಿಯನ್ನೇ ಅಪಹರಿಸಲು ಯತ್ನಿಸಿದ ಕ್ಯಾಬ್ ಚಾಲಕ