ನವದೆಹಲಿ: ಪ್ರಧಾನಿ ಮೋದಿ 10 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡುವ ಹಿನ್ನಲೆಯಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿರುವ ರಾಮಾಯಣ ಧಾರವಾಹಿಯನ್ನು ಕೆಲವು ಕಾಲ ಸ್ಥಗಿತಗೊಳಿಸಲಾಯಿತು.
ಈ ಮೂಲಕ ಟ್ವಿಟರಿಗರ ಆಸೆ ನೆರವೇರಿಸಲಾಯಿತು. 9 ಗಂಟೆಗೆ ಆರಂಭವಾಗುವ ರಾಮಾಯಣ ಧಾರವಾಹಿಯ ಮರುಪ್ರಸಾರದಿಂದ ದೂರದರ್ಶನ ಮತ್ತೆ ಜನಪ್ರಿಯತೆಯ ತುತ್ತ ತುದಿಗೆ ತಲುಪಿದೆ. ಇದೇ ಕಾರಣಕ್ಕೆ ಧಾರವಾಹಿ ವೀಕ್ಷಿಸಬೇಕಾಗಿರುವುದರಿಂದ ಪ್ರಧಾನಿ ಮೋದಿ ಬಳಿ ಟ್ವಿಟರಿಗರೊಬ್ಬರು ಭಾಷಣವನ್ನು 10.30 ಕ್ಕೆ ಮಾಡಿ ಎಂದು ಮನವಿ ಮಾಡಿದ್ದು ವೈರಲ್ ಆಗಿತ್ತು.
ಕೊನೆಗೂ ಟ್ವಿಟರಿಗರ ಮನವಿಗೆ ಸ್ಪಂದಿಸಿದ ದೂರದರ್ಶನ ಕೆಲವು ಕ್ಷಣ ರಾಮಾಯಣ ಪ್ರಸಾರ ನಿಲ್ಲಿಸಿ ಪ್ರಧಾನಿ ಭಾಷಣದ ಬಳಿಕ ಪ್ರಸಾರ ಮುಂದುವರಿಸುವುದಾಗಿ ಪ್ರಕಟಣೆ ನೀಡಿತು.