ನವದೆಹಲಿ: ತ್ರೇತಾಯುಗದಲ್ಲಿ ಲಂಕೆಗೆ ಹೋಗಲು ಶ್ರೀರಾಮ ಚಂದ್ರ ಹನುಮಂತನ ಸಹಾಯದಿಂದ ರಾಮ ಸೇತು ಕಟ್ಟಿದ. ಅದು ಈಗಲೂ ಇದೆ ಎಂದು ನಂಬಲಾಗುತ್ತಿದೆ. ಈ ರಾಮಸೇತು ಇರುವುದೇನೋ ನಿಜ. ಆದರೆ ಇದು ಪ್ರಾಕೃತಿಕವಾಗಿ ಆಗಿದ್ದೇ ಅಥವಾ ಮಾನವ ನಿರ್ಮಿತವೇ ಎಂದು ಅನುಮಾನಗಳಿವೆ.
ಇದನ್ನು ಪರಿಹರಿಸಲು ಇದೀಗ ಪುರಾತತ್ವ ಇಲಾಖೆ ಅಧ್ಯಯನವೊಂದಕ್ಕೆ ಮುಂದಾಗಿದೆ. ಮುಂಬರುವ ಅಕ್ಟೋಬರ್ ತಿಂಗಳಿನಿಂದ ನವಂಬರ್ ವರೆಗೆ ರಾಮ ಸೇತುವಿನ ಬಗ್ಗೆ ಅಧ್ಯಯನ ನಡೆಸಲಾಗುವುದಂತೆ.
ಈ ಮೂಲಕ ಶ್ರೀಲಂಕಾಕ್ಕೆ ಸಮುದ್ರ ಮಾರ್ಗದಲ್ಲಿ ಸಂಪರ್ಕ ಕಲ್ಪಿಸುವ ಈ ಸೇತುವೆ ಮಾನವ ನಿರ್ಮಿತವೇ? ಪ್ರಾಕೃತಿಕವೇ ಎಂದು ತಿಳಿದುಬರಲಿದೆ. ಇದಕ್ಕಾಗಿ ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಮತ್ತು ತಜ್ಞರನ್ನು ಬಳಸಿಕೊಳ್ಳಲಾಗುವುದು ಎಂದು ಪುರಾತತ್ವ ಇಲಾಖೆಯ ನಿರ್ದೇಶಕರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ