ನವದೆಹಲಿ: ಪ್ರಧಾನಿ ಮೋದಿ ಸಂಪುಟದಲ್ಲಿ ರಕ್ಷಣಾ ಸಚಿವರಾಗಿ ಅಧಿಕಾರ ಸ್ವೀಕರಿಸಿದ ರಾಜನಾಥ್ ಸಿಂಗ್ ಇಂದು ಸಿಯಾಚಿನ್ ಗೆ ಭೇಟಿ ಕೊಡಲಿದ್ದಾರೆ.
ಭಾರತೀಯ ಯೋಧರಿಗೆ ಅತ್ಯಂತ ಕಠಿಣ ಪ್ರದೇಶವೆನಿಸಿರುವ ಸಿಯಾಚಿನ್ ಗೆ ಭೇಟಿ ಕೊಡುವ ಮೂಲಕ ರಾಜನಾಥ್ ಸಿಂಗ್ ಈ ಪ್ರದೇಶಕ್ಕೆ ಭೇಟಿ ಕೊಟ್ಟ ಮೂರನೇ ರಕ್ಷಣಾ ಸಚಿವ ಎನಿಸಿಕೊಳ್ಳಲಿದ್ದಾರೆ. ಇದಕ್ಕೂ ಮೊದಲು ಮನೋಹರ್ ಪರಿಕ್ಕರ್ ಮತ್ತು ನಿರ್ಮಲಾ ಸೀತಾರಾಮನ್ ಈ ದಾಖಲೆ ಮಾಡಿದ್ದರು.
ಸೇನಾ ಮುಖ್ಯಸ್ಥರೊಂದಿಗೆ ಸಿಯಾಚಿನ್ ಗೆ ಭೇಟಿ ಕೊಡಲಿರುವ ರಾಜನಾಥ್ ಸಿಂಗ್ ಇಲ್ಲಿ ಸೈನಿಕರ ಜತೆ ಮಾತುಕತೆ ನಡೆಸಿ ಅವರ ಕಷ್ಟಗಳನ್ನು ಕಣ್ಣಾರೆ ನೋಡಲಿದ್ದಾರೆ.