ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು 2023-24ನೇ ಸಾಲಿನ ಬಜೆಟ್ ಮಂಡಿಸುವ ಬದಲು 2022ರ ಬಜೆಟ್ ಓದಿ ಇದೀಗ ನಗೆಪಾಟಲಿಗೀಡಾಗಿದ್ದಾರೆ.
ಸುಮಾರು 8 ನಿಮಿಗಳ ಕಾಲ ಹಿಂದಿನ ವರ್ಷದ ಬಜೆಟ್ ಓದಿ ಹಾಸ್ಯಕ್ಕೆ ಒಳಗಾಗಿದ್ದಾರೆ. ಈ ಕುರಿತ ವೀಡಿಯೋ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಹೌದು. ಶುಕ್ರವಾರ ಅಶೋಕ್ ಗೆಹ್ಲೋಟ್ ರಾಜ್ಯ ಬಜೆಟ್ ಮಂಡಿಸಬೇಕಿತ್ತು. ಅದರಂತೆ ಬಜೆಟ್ ಓದಲು ಶುರು ಮಾಡಿದ್ದರು. ಸುಮಾರು 8 ನಿಮಿಷಗಳ ಕಾಲ ಬಜೆಟ್ ಓದಿದ ನಂತರ ಸಚಿವ ಮಹೇಶ್ ಜೋಶಿ ಅವರು ತಿಳಿಸಿದ ಬಳಿಕ ಬಜೆಟ್ ಭಾಷಣವನ್ನು ನಿಲ್ಲಿಸಿದರು.
2023-24ರ ಬಜೆಟ್ ಮಂಡಿಸಬೇಕಿದ್ದ ಗೆಹ್ಲೋಟ್ ಕಳೆದ ವರ್ಷ ಜಾರಿಗೆ ತಂದಿದ್ದ ಯೋಜನೆಗಳು ಹಾಗೂ ನಗರಾಭಿವೃದ್ಧಿ ಯೋಜನೆಗಳನ್ನೇ ಓದುತ್ತಿದ್ದರು. ಈ ವೇಳೆ ಸಚಿವ ಮಹೇಶ್ ಜೋಶಿ ಸಿಎಂಗೆ ಕಳೆದ ವರ್ಷದ ಬಜೆಟ್ ಓದುತ್ತಿರುವುದಾಗಿ ತಿಳಿಸಿದರು. ಬಳಿಕ ಹಳೆಯ ಬಜೆಟ್ ನಿಲ್ಲಿಸಿದ ಮುಖ್ಯಮಂತ್ರಿ ಕ್ಷಮೆಯಾಚಿಸಿದರು.