Webdunia - Bharat's app for daily news and videos

Install App

ಮಧ್ಯಪ್ರದೇಶದಲ್ಲಿ ಫ್ರೀ ಈರುಳ್ಳಿ

Webdunia
ಶುಕ್ರವಾರ, 26 ಆಗಸ್ಟ್ 2016 (08:47 IST)
ಸೂಕ್ತ ಮೌಲ್ಯ ಸಿಗದೇ ಗೋದಾಮು, ಮಂಡಿಗಳಲ್ಲಿ ಕೊಳೆತು ನಾರುತ್ತಿರುವ ಹಿನ್ನೆಲೆಯಲ್ಲಿ ಈರುಳ್ಳಿಯನ್ನು ಉಚಿತವಾಗಿ ನೀಡಲು ಮಧ್ಯಪ್ರದೇಶ ಸರ್ಕಾರ ನಿರ್ಧರಿಸಿದೆ. 


 
ಈ ನಿರ್ಧಾರದಿಂದ ಸರ್ಕಾರಕ್ಕೆ ಸುಮಾರು 100ಕೋಟಿ ನಷ್ಟವಾಗಲಿದೆಯಾದರೂ 30 ಕೋಟಿ ರೂ ಬೆಲೆಯ 
3.28 ಲಕ್ಷ ಕ್ವಿಂಟಾಲ್ ಈರುಳ್ಳಿ ಗೋದಾಮುಗಳಲ್ಲಿ ಕೊಳೆತು ಹೋದ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.
 
ಮೇ ತಿಂಗಳಿಂದ ಈರುಳ್ಳಿ ಬೆಲೆ ನೆಲಕ್ಕೆ ಕುಸಿದಿದ್ದು , ಬೆಲೆ ಚೇತರಿಕೆ ಕಾಣದೇ ರೈತರು ಕಂಗಾಲಾಗಿದ್ದಾರೆ. 
 
ರೈತರಿಂದ ನೇರವಾಗಿ ರೂಪಾಯಿ ಕೆಜಿಗೆ 6 ರೂಪಾಯಿಯಂತೆ  10.4 ಲಕ್ಷ ಕ್ವಿಂಟಾಲ್ ಈರುಳ್ಳಿಯನ್ನು ಸರ್ಕಾರ ಖರೀದಿಸಿತ್ತು. ಆದರೆ ರಾಜ್ಯದಲ್ಲಿ ಸೂಕ್ತ ದಾಸ್ತಾನು ವ್ಯವಸ್ಥೆ ಇಲ್ಲದೇ, ಅದರಲ್ಲೂ ವಿಪರೀತ ಮಳೆಯಾಗುತ್ತಿರುವುದರಿಂದ ಈರುಳ್ಳಿ ಗೋದಾಮುಗಳಲ್ಲಿಯೇ ಕೊಳೆಯಲಾರಂಭಿಸಿತು. ಹರಾಜಿನಲ್ಲಿ ಪಾಲ್ಗೊಂಡವರು ಸಹ ಅತಿ ಕಡಿಮೆ ಬೆಲೆಗೆ ಕೇಳತೊಡಗಿದಾಗ ಬೇರೆ ದಾರಿ ಕಾಣದ ಸರ್ಕಾರ ಸಾಗಾಣಿಕೆ ವೆಚ್ಚವನ್ನಾದರೂ ಮರಳಿ ಪಡೆಯಲು 1 ಟೋಕನ್‌ಗೆ 1 ರೂಪಾಯಿ/ಕೆಜಿ  ನೀಡಲು ಮುಂದಾಗಿದೆ ಎಂದು ಮಧ್ಯಪ್ರದೇಶ ರಾಜ್ಯ ಸಹಕಾರ ಮಾರಾಟ ಒಕ್ಕೂಟದ ಪ್ರಧಾನ ವ್ಯವಸ್ಥಾಪಕರಾದ ಯೋಗೇಶ್ ಜೋಷಿ ಹೇಳಿದರು.
 
ಬೇರೆ ರಾಜ್ಯಗಳಲ್ಲಿ ಸಹ ಈರುಳ್ಳಿ ಬೆಳೆಗಾರರು ದಯನೀಯ ಸ್ಥಿತಿಯಲ್ಲಿದ್ದಾರೆ. ಮಹಾರಾಷ್ಟ್ರದಲ್ಲಿ ಈರುಳ್ಳಿ ಸಗಟು ಮಾರಾಟ ಬೆಲೆ ನೆಲಕಚ್ಚಿದ್ದು, ಹರಾಜೊಂದರಲ್ಲಿ ರೈತನಿಗೆ ಒಂದು ಕೆ.ಜಿ ಈರುಳ್ಳಿಯನ್ನು ಐದು ಪೈಸೆಗೆ ಕೇಳಲಾಗಿದೆ. ಇದು ಸಗಟು ಮಾರುಕಟ್ಟೆಯಲ್ಲಿ ರೈತರು ಎದುರಿಸುತ್ತಿರುವ ದುಃಸ್ಥಿತಿಯನ್ನು ಜಾಹೀರುಗೊಳಿಸಿದೆ.
 
ಈರುಳ್ಳಿಯ ಅತಿರಿಕ್ತ ಉತ್ಪಾದನೆಯಿಂದಾಗಿ ಕಳೆದ ಎರಡು ತಿಂಗಳಿಂದ ರೈತರ ಪರಿಸ್ಥಿತಿ ಶೋಚನೀಯವಾಗುತ್ತಿದೆ. ಮಂಗಳವಾರ ಹರಾಜಿನಲ್ಲಿ ಪಾಲ್ಗೊಂಡಿದ್ದ ನನಗೆ ಒಂದು ಕಿಲೋಗೆ ಐದು ಪೈಸೆಯನ್ನು ಆಫರ್ ಮಾಡಲಾಯಿತು ಎಂದು ನಿಪಾಡ್ ತಾಲ್ಲೂಕಿನ ಸೈಖೇಡಾದ ರೈತ ಸುಧಾಕರ್ ದಾರದೆ ಅಳಲು ತೋಡಿಕೊಂಡಿದ್ದಾರೆ. 
 
ತಾನು ಕಷ್ಟಪಟ್ಟು ಬೆಳೆದಿರುವ ಉತ್ಪನ್ನಕ್ಕೆ ಬೆಲೆಯೇ ಸಿಗದ ನೋವಿನಲ್ಲಿ ರೈತ ಸರಕಿನೊಂದಿಗೆ ಮನೆಗೆ ಹಿಂತಿರುಗಿದ್ದಾನೆ.
 
ಬರದ ಪರಿಣಾದಿಂದಾಗಿ ಆಗಸ್ಟ್ 21, 2015ರಲ್ಲಿ ಈರುಳ್ಳಿ ಬೆಲೆ ಕ್ವಿಂಟಾಲ್‌ಗೆ 5824ಕ್ಕೆ ಏರಿತ್ತು. ಆಗ ರೈತರು ಪ್ರತಿ ಕೆಜಿಗೆ 54 ರೂಪಾಯಿಯನ್ನು ಪಡೆದಿದ್ದರು. ಈರುಳ್ಳಿ ಬೆಲೆ ಈ ಮಟ್ಟದಲ್ಲಿ ಏರಿದ್ದನ್ನು ಕಂಡ ರೈತರು ಈ ಬಾರಿ ಬೆಳೆಯಲು ಇದೇ ಬೆಳೆಯನ್ನು ಆಯ್ದುಕೊಂಡರು. 
 
ಇನ್ನೊಂದು ಕಾರಣವೇನೆಂದರೆ ಬರದ ಕಾರಣಕ್ಕೆ ಹಲವಾರು ರೈತರು ಕಬ್ಬಿನ ಬದಲಾಗಿ ಈರುಳ್ಳಿಯನ್ನೇ ಆಯ್ದುಕೊಂಡರು. ಆದರೆ ಈಗ ಅತಿರಿಕ್ತ ಉತ್ಪಾದನೆಯಿಂದಾಗಿ ಬೆಲೆಯೇ ಇಲ್ಲದಂತಾಗಿದೆ ಎಂದು ಪುಣೆ ಮೂಲದ ಕೃಷಿ ವಿಶ್ಲೇಷಕರಾದ ದೀಪಕ್ ಚವನ್ ಹೇಳುತ್ತಾರೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments