Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಎಟಿಎಂಗಳಲ್ಲಿ ಹಣವಿಲ್ಲ, ನೋಟುಗಳಿಂದ ಗಾಯಕಿಯನ್ನೇ ಮುಳುಗಿಸಿದರು

ಎಟಿಎಂಗಳಲ್ಲಿ ಹಣವಿಲ್ಲ, ನೋಟುಗಳಿಂದ ಗಾಯಕಿಯನ್ನೇ ಮುಳುಗಿಸಿದರು
ನವಸಾರಿ , ಸೋಮವಾರ, 26 ಡಿಸೆಂಬರ್ 2016 (10:16 IST)
ಒಂದೆಡೆ ಜನರು ಹಣಕ್ಕಾಗಿ ಎಟಿಎಂ, ಬ್ಯಾಂಕ್‌ಗಳ ಮುಂದೆ ಗಂಟೆಗಟ್ಟಲೆ ಸರತಿಸಾಲಲ್ಲಿ ನಿಲ್ಲುತ್ತಾರೆ. ಎಷ್ಟು ಕಟ್ಟಪಟ್ಟರೂ ಕೈಗೆ ಸಿಗುವುದು ಅಷ್ಟೋ ಇಷ್ಟು. ಅಷ್ಟೇ ಅಲ್ಲ ದೇಶದಲ್ಲಿರುವ ಹೆಚ್ಚಿನ ಎಟಿಎಂಗಳ ಮಂದೆ ನೋ ಕ್ಯಾಶ್ ಬೋರ್ಡ್‌ನ್ನೇ ನೇತು ಹಾಕಿರುವುದನ್ನು ಕಾಣುತ್ತೇನೆ. ಆದರೆ ಗುಜರಾತಿನ ನವಸಾರಿಯಲ್ಲಿ ನಡೆದಿರುವ ಒಂದು ಘಟನೆ, ಇಷ್ಟೊಂದು ಹಣ ಎಲ್ಲಿಂದ ಬಂತು ಎಂಬ ಚರ್ಚೆಯನ್ನು ಹುಟ್ಟುಹಾಕಿದೆ. 
ಉತ್ತರ ಭಾರತದಲ್ಲಿ ಭಜನೆ, ಗಾಯನ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹಣವನ್ನು ಸುರಿಯುವ ಸಂಪ್ರದಾಯವಿದೆ. ಅಂತೆಯೇ ನಿನ್ನೆ ಕೂಡ ಗುಜರಾತಿನ ನವಸಾರಿಯಲ್ಲಿ ಭಾನುವಾರ "ಭಜನ್ ಸಂಧ್ಯಾ" ಕಾರ್ಯಕ್ರಮದಲ್ಲಿ ಗಾಯಕಿಯ ಮೇಲೆ ಹಣವನ್ನು ಸುರಿಯಲಾಗಿದೆ. 10 ರೂಪಾಯಿಯಿಂದ ಹಿಡಿದು 2,000 ರೂಪಾಯಿವರೆಗಿನ ನೋಟುಗಳಿಂದಲೇ ಆಕೆಯನ್ನು ಮುಳುಗಿಸಲಾಗಿದೆ. 
 
ದೇಶದಲ್ಲಿ ಆರ್ಥಿಕ ತುರ್ತುಪರಿಸ್ಥಿತಿಯಂತಹ ವಾತಾವರಣ ನಿರ್ಮಾಣವಾಗಿರುವಾಗ ಇಷ್ಟೊಂದು ಪ್ರಮಾಣದ ಹಣ ಎಲ್ಲಿಂದ ಬಂತು ಎಂಬ ಪ್ರಶ್ನೆ ಉದ್ಭವವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜಮೀರ್ ಅಹ್ಮದ್ ವಿರುದ್ಧ ಜಿ.ಎ.ಬಾವ ಕಣಕ್ಕೆ?